ಬಂಟ್ವಾಳ: ಸಾಮನ್ಯಸಭೆಯ ನಿರ್ಣಯದ ಯಥಾ ಪ್ರತಿಯನ್ನು ನೀಡುವಂತೆ ಲಿಖಿತ ಮನವಿ ಮಾಡಿ 15 ದಿನ ಕಳೆದರೂ ನಿರ್ಣಯದ ಯಥಾ ಪ್ರತಿಯನ್ನು ನೀಡದ ಹಾಗೂ ಜನವಿರೋಧಿ ಧೋರಣೆ ಅನುಸರಿಸುತ್ತಿರುವ ಪುರಸಭಾ ಆಡಳಿತದ ಕಾರ್ಯವೈಖರಿಯನ್ನು ವಿರೋಧಿಸಿ ವಿಪಕ್ಷ ಬಿಜೆಪಿ ಸದಸ್ಯರು ಬುಧವಾರ ಪುರಸಭಾ ಕಾರ್ಯಲಯದ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.

9

4 (2)

5 (1)

6 (1)

7

8

 

ಕಳೆದ ಜೂ.16ರಂದು ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆ ನಡೆದಿದ್ದು ಅದರ ನಿರ್ಣಯ ಪ್ರತಿ ನೀಡುವಂತೆ ವಿಪಕ್ಷ ಸದಸ್ಯ ದೇವದಾಸ್ ಶೆಟ್ಟಿ ಜೂ.18ರಂದು ಲಿಖಿತ ಮನವಿ ಸಲ್ಲಿಸಿದ್ದರು. ಒಂದು ವಾರ ಕಳೆದರೂ ಮನವಿ ಸ್ಪಂದಿಸಿ ಪ್ರತ್ಯತ್ತರ ನೀಡಿದೇ ಇದ್ದಾಗ ಏಳು ದಿನ ಕಳೆದರೂ ನಿರ್ಣಯದ ಯಥಾ ಪ್ರತಿ ನೀಡದಿರಲು ಕಾರಣವೇನು ಎಂದು ಪ್ರಶ್ನಿಸಿ ಮತ್ತೊಂದು ಮನವಿ ನೀಡದರೂ ಪುರಸಭೆಯಿಂದ ಉತ್ತರ ದೊರೆತಿರಲಿಲ್ಲ. ಆಡಳಿತ ಪಕ್ಷದ ಈ ಧೋರಣೆಯನ್ನು ವಿರೋಧಿಸಿ ಧರಣಿ ನಡೆಸುತ್ತಿರುವುದಾಗಿ ಪ್ರತಿಭಟನಕಾರರು ತಿಳಿಸಿದರು. ಜಿಲ್ಲಾಧಿಕಾರಿ ಬಾರದೆ ಧರಣಿ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ವಿಪಕ್ಷ ಸದಸ್ಯ ಗೋವಿಂದ ಪ್ರಭು ನೇತೃತ್ವದಲ್ಲಿ ಸದಸ್ಯರಾದ ದೇವದಾಸ್ ಶೆಟ್ಟಿ, ಭಾಸ್ಕರ ಟೈಲರ್, ಸುಗುಣ ಕಿಣಿ, ಸಂಧ್ಯಾ ನಾಯಕ್ ಧರಣಿಯಲ್ಲಿ ಭಾಗವಹಿಸಿದರು. ವಿಪಕ್ಷ ಸದಸ್ಯರು ಧರಣಿ ನಡೆಸುತ್ತಿರುವುದಾಗಿ ಮಾಹಿತಿ ಪಡೆದುಕೊಂಡ ತಾಲೂಕು ಪಂಚಾಯತ್ ಸದಸ್ಯರಾದ ದಿನೇಶ್ ಅಮ್ಟೂರು, ಆನಂದ ಶಂಭೂರು, ಪುರಸಭೆಯ ಮಾಜಿ ಸದಸ್ಯ ಸುರೇಶ್ ಕುಲಾಲ್ ಬಿಜೆಪಿ ಪ್ರಮುಖರಾದ ರಾಮದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ಪ್ರಮೋದ್ ಅಜ್ಜಿಬೆಟ್ಟು ಮೊದಲಾದವರು ಪ್ರತಿಭಟನೆಗೆ ಸಾಥ್ ನೀಡಿ ಧರಣಿಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭ ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ ಹಾಗೂ ಪ್ರಭಾರ ಮುಖ್ಯಾಧಿಕಾರಿ ಮತ್ತಡಿ ಧರಣಿ ನಿರತರನ್ನು ಮನವೊಲಿಸುವ ಪ್ರಯತ್ನ ನಡೆಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ತಹಸೀಲ್ದಾರ್ ಮಲ್ಲೇಸ್ವಾಮೀ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕಥೆ ನಡೆಸಿದರೂ ಫಲಪ್ರಧವಾಗಲಿಲ್ಲ.

By Suddi9

Leave a Reply

Your email address will not be published. Required fields are marked *