ನವದೆಹಲಿ: ಜಮ್ಮು ಕಾಶ್ಮೀದ ಹೆಸರನ್ನು ಬದಲಾಯಿಸಲು ಚಿಂತಿಸುತ್ತಿರುವ ನೂತನ ಮೋದಿ ಸರಕಾರ  ಅದರ ಬಗೆಗೆ ದಿಟ್ಟ ಹೆಜ್ಜೆಯನ್ನು ಇರಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದ ಹೆಸರನ್ನು ಪಾಕ್ ಆಕ್ರಮಿತ ಜಮ್ಮು-ಕಾಶ್ಮೀರ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಚಿಂತಿಸಿದೆ. ಹಾಗೆಯೇ, ದಶಕಗಳ ಕಾಲ ಕಾಶ್ಮೀರ ಬಿಟ್ಟುಹೋಗಿದ್ದ ಪಂಡಿತರನ್ನು ಮತ್ತೆ ತಮ್ಮ ಮೂಲಸ್ಥಾನಕ್ಕೆ ಕರೆತರುವ ಬಗ್ಗೆಯೂ ಕಾರ್ಯಯೋಜನೆಗಳು ನಡೆಯುತ್ತಿವೆ.

Shaunter Lake kashmir_map
ಜಮ್ಮು-ಕಾಶ್ಮೀರ ರಾಜ್ಯವನ್ನು ಜನಸಾಮಾನ್ಯರು ಕಾಶ್ಮೀರ ಎಂದೇ ಕರೆಯುವುದು ರೂಢಿ. ಆದರೆ, ರಾಜತಾಂತ್ರಿಕ ಮಟ್ಟದಲ್ಲಿ ಈ ರೀತಿಯಾಗಿ ಕೇವಲ ಕಾಶ್ಮೀರ ಎಂಬ ಸಂಬೋಧನೆ ಇರುವುದು ಸರಿಯಲ್ಲ. ಜಮ್ಮು-ಕಾಶ್ಮೀರದಲ್ಲಿ ಮೂರು ಪ್ರಮುಖ ಭಾಗಗಳಿವೆ. ಜಮ್ಮು, ಲಡಾಕ್ ಮತ್ತು ಕಾಶ್ಮೀರ ಪ್ರದೇಶಗಳಿವೆ. ಕಾಶ್ಮೀರಕ್ಕಿಂತ ಜಮ್ಮು ಮತ್ತು ಲಡಾಕ್ ಭೌಗೋಳಿಕವಾಗಿ ಹಾಗೂ ಜನಸಂಖ್ಯೆ ವಿಚಾರದಲ್ಲಿ ದೊಡ್ಡದಿವೆ. ಜಮ್ಮು-ಕಾಶ್ಮೀರವನ್ನ ಕಾಶ್ಮೀರ ಎಂದು ಕರೆದಾಗ ಜಮ್ಮು ಮತ್ತು ಲಡಾಕ್ ಅನ್ನ ಒಳಗೊಂಡಂತಾಗುವುದಿಲ್ಲ. ಇದು, ಮೋದಿ ಸರ್ಕಾರದ ನಿಲುವು. ಪಾಕಿಸ್ತಾನದೊಂದಿಗೆ ವ್ಯವಹರಿಸುವಾಗ ಈ ನಿಲುವು ಉಪಯೋಗಕ್ಕೆ ಬರಬಹುದು.
ಪಾಕ್ ಆಕ್ರಮಿತ ಕಾಶ್ಮೀರದ ಹೆಸರಿನಲ್ಲಿ ಬದಲಾವಣೆ ತಂದರೆ ಏನು ಪ್ರಯೋಜನ ಎಂದು ಆ ರಾಜ್ಯದ ಆಡಳಿತಾರೂಢ ನ್ಯಾಷನಲ್ ಕಾನ್ಫೆರೆನ್ಸ್ ಕೇಳಿದೆ. “ಇಂಥ ನಿಲುವುಗಳು ಕೇವಲ ತೇಪೆ ಹಚ್ಚುವ ಕೆಲಸಗಳಾಗುತ್ತವಷ್ಟೇ.. ಜಮ್ಮು-ಕಾಶ್ಮೀರದ ಮಹಾರಾಜರನ್ನ ಕಾಶ್ಮೀರದ ಮಹಾರಾಜ ಎಂದೇ ಕರೆಯಲಾಗುತ್ತಿತ್ತು. ಈಗ ಹೆಸರು ಬದಲಾಯಿಸಿದರೆ ಸಮಸ್ಯೆಗಳನ್ನ ಬಗೆಹರಿಸಲು ಸಾಧ್ಯವಾಗುತ್ತಾ?” ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾರವರ ಸಲಹೆಗಾರ ತನ್ವೀರ್ ಸಾದಿಕ್ ಪ್ರಶ್ನಿಸಿದ್ದಾರೆ…

ಎರಡು ದಶಕಗಳ ಹಿಂದೆ ಭಯೋತ್ಪಾದಕರ ಉಪಟಳದಿಂದಾಗಿ ಕಾಶ್ಮೀರದಿಂದ ಹೊರಬಿದ್ದು ಜೀವನ ನಡೆಸುತ್ತಿರುವ ಕಾಶ್ಮೀರೀ ಪಂಡಿತರನ್ನ ಮತ್ತೆ ಗೌರವಯುತವಾಗಿ ಅವರ ಸ್ಥಾನಗಳಿಗೆ ಕರೆತರಲು ಸರ್ಕಾರ ದೊಡ್ಡ ಯೋಜನೆ ಹಾಕಿಕೊಂಡಿದೆ. ಈ ಯೋಜನೆಯ ರೂಪುರೇಖೆ ಕೆಲವೇ ದಿನಗಳಲ್ಲಿ ಸಿಗುವ ಸಾಧ್ಯತೆ ಇದೆ

By Suddi9

Leave a Reply

Your email address will not be published. Required fields are marked *