ಬಂಟ್ವಾಳ: ಸರಕಾರ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ದಂದೆಯನ್ನು ಬಂಟ್ವಾಳ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ . ಆರೋಪಿಯು 43 ಚೀಲದಲ್ಲಿದ್ದ ಒಟ್ಟು 22 ಕ್ವಿಂಟಾಲ್ ಅಕ್ಕಿ ಲಾರಿಯಲ್ಲಿ ಲೋಡ್ ಮಾಡಿ  ಸಾಗಾಟಕ್ಕೆ ಬಳಸಿದ್ದ ಲಾರಿಯನ್ನು ವಶಪಡಿಸಿಕೊಂಡು ಪ್ರಕರಣವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆರೋಪಿಯನ್ನು ತುಂಬೆ ನಿವಾಸಿ ಇಬ್ರಾಹಿಂ ಎಂದು ಗುರುತಿಸಲಾಗಿದೆ.

DSC_0619
ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು 1 ರೂ.ಗೆ 1 ಕೆ.ಜಿ.ಯಂತೆ ಪಡೆದ ಅಕ್ಕಿಯನ್ನು ತನ್ನ ಎಂ.ಎಂ. ಬಜಾರ್ ನಲ್ಲಿ ಕಡಿಮೆ ಹಣಕ್ಕೆ ಖರೀದಿಸುತ್ತಿದ್ದ ಇಬ್ರಾಹಿಂ ಬಳಿಕ ಗೋಣಿ ಚೀಲದಲ್ಲಿ ತುಂಬಿ ಕಾಳಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.  ಈ ಬಗ್ಗೆ ಖಚಿತ  ಮಾಹಿತಿ ಪಡೆದ ಬಂಟ್ವಾಳ ಆಹಾರ ಶಾಖೆಯ ಅಧಿಕಾರಿಗಳು ಕಾರ್ಯಚರಣೆ ನಡೆಸಿದಾಗ ಆರೋಪಿ 50 ಕೆ.ಜಿ.ಯ ಪ್ಲಾಸ್ಟಿಕ್ ಗೋಣಿಗಳಲ್ಲಿ ಅಕ್ಕಿಯನ್ನು ತುಂಬಿ ಲಾರಿಯಲ್ಲಿ ಲೋಡು ಮಾಡಿಸುತ್ತಿದ್ದ.  ತಕ್ಷಣ ಅಕ್ಕಿ ಹಾಗೂ ಲಾರಿಯನ್ನು ವಶಪಡಿಸಿಕೊಂಡ ಅಧಿಕಾರಿಗಳು ಆತನ ವಿರುದ್ದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣವನ್ನು ಪೊಲೀಸರಿಗೆ ಹಸ್ತಾಂತರಿಸಿದರು. ಇಷ್ಟೊಂದು ಪ್ರಮಾಣದಲ್ಲಿ ಅಕ್ಕಿ ಲಭ್ಯವಾಗ ಬೇಕಾದರೆ ಇದು ಕೇವಲ ಬಿಪಿಎಲ್ ಕಾರ್ಡ್ ದಾರರು ಮಾರಾಟ ಮಾಡಿದ ಅಕ್ಕಿಯಲ್ಲದೆ ಇದರೊಂದಿಗೆ ನ್ಯಾಯಬೆಲೆ ಅಂಗಡಿಗಳ ಶಾಮೀಲಾತಿಯೂ ಇದೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಹೆಚ್ಚಿನ ತನಿಖೆಯಿಂದ ಸತ್ಯಾಂಶ ಹೊರಬೇಳಬೇಕಿದೆ.ಬಂಟ್ವಾಳ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

By Suddi9

Leave a Reply

Your email address will not be published. Required fields are marked *