ಗುರುಪುರ: 2017-18ನೇ ಸಾಲಿನ ದ್ವಿ ತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.90ರಷ್ಟು ಅಂಕ ಪ್ರಾಪ್ತಿಯಾಗಿದೆ.
ಕಲಾ ವಿಭಾಗದಲ್ಲಿ ಶೇ. 100, ವಾಣಿಜ್ಯ ವಿಭಾಗದಲ್ಲಿ ಶೇ 91.66 ಮತ್ತು ವಿಜ್ಞಾನ ವಿಭಾಗದಲ್ಲಿ ಶೇ 60 ಅಂಕ ಲಭಿಸಿದೆ.
ಸುಚಿತ್ರಾ(ವಾಣಿಜ್ಯ-ಅಂಕ 558), ಮೊಹಮ್ಮದ್ ಅರ್ಶಕ್(ವಾಣಿಜ್ಯ-ಅಂಕ 522) ಮತ್ತು ಗೌತಮಿ(ವಾಣಿಜ್ಯ-ಅಂಕ 514) ಈ ಮೂವರು ವಿದ್ಯಾರ್ಥಿಗಳು ವಿಶೇಷ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಉಳಿದಂತೆ ಕಾವ್ಯ(ವಾಣಿಜ್ಯ-509), ಪುಣ್ಯ(ವಾಣಿಜ್ಯ-508) ಮತ್ತು ಶೈನಿ(ವಾಣಿಜ್ಯ-504) ಅಂಕ ಗಳಿಸಿ ವಿಶೇಷ ಸಾಧನೆಗೈದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಾಸುದೇವ ಕಾಮತರ ಪ್ರಕಟನೆ ತಿಳಿಸಿದೆ.
