ಕಲ್ಲಡ್ಕ10 ನೇ ತರಗತಿಯ ವಿದ್ಯಾರ್ಥಿಗಳಿಂದ ದೀಪಪ್ರದಾನ
ಕಲ್ಲಡ್ಕ:ಭಾರತ ಎಲ್ಲಾರಂಗದಲ್ಲೂ ಮುಂದುವರಿದಿದೆ ಆದರೆ ದೇಶದ ಜನರಲ್ಲಿ ದೇಶಭಕ್ತಿಯ ಕೊರತೆಇರುವ ಕಾರಣದಿಂದ ಈ ದೇಶಕ್ಕೆ ಅನೇಕ ದಾಳಿಗಳು ನಡೆದಿವೆ. ಅಂತಹ ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದೆ.ಈ ಶಿಕ್ಷಣವನ್ನು ಜೀವನದಲ್ಲಿ ಪ್ರತಿಯೊಂದು ವಿದ್ಯಾರ್ಥಿಯು ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|ಪ್ರಭಾಕರ ಭಟ್‍ಕಲ್ಲಡ್ಕ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಅವರು ಶನಿವಾರ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಿಂದ ದೀಪಪ್ರದಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರು ಡಾ|ನಿಮ್ಮಿ ಶೆಟ್ಟಿ ನಮ್ಮದೇಶದಲ್ಲಿ ಲಕ್ಷಾಂತರ ಶಾಲೆಗಳಿವೆ ಅಂತಹ ಲಕ್ಷದಲ್ಲಿ ಒಂದು ಮಾದರಿ ವಿದ್ಯಾಕೇಂದ್ರ ಶ್ರೀರಾಮ ವಿದ್ಯಾಕೇಂದ್ರವಾಗಿದೆಇಂತಹ ವಿದ್ಯಾಕೇಂದ್ರಇನ್ನಷ್ಟುರಾಷ್ಟ್ರಭಕ್ತ ವ್ಯಕ್ತಿತ್ವ ಹೊಂದಿರುವ ವಿದ್ಯಾರ್ಥಿಗಳನ್ನು ನಿರ್ಮಾಣಗೊಳಿಸಲಿ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ವಹಿಸಿದ್ದರು. ವೇದಿಕೆಯಲ್ಲಿ ಉದ್ಯಮಿ ಹರಿರಾಜ್ ಶೆಟ್ಟಿ, ಬೆಂಗಳೂರು, ಡಾ|ನಿಮ್ಮಿ ಶೆಟ್ಟಿ, ಮಾಜಿ ಜಿ.ಪ.ಸದಸ್ಯ ಸುಬ್ರಹ್ಮಣ್ಯ ಶಾಸ್ತ್ರಿ , ಶ್ರೀಕಲಾ ಶಾಸ್ತ್ರಿ, ಶಿವಕುಮಾರ್ ಗೌಡ, ಕರುಣಾಶ್ರೀ ಚಾರಿಟೇಬಲ್ ಟ್ರಸ್ಟ್ ಪ್ರಮುಖರು, ಅಶೋಕ್‍ಕುಮಾರ್, ಪ್ರದೀಪ್ , ಪವನ್‍ಅಂಜಯ್ಯ ನಿವೃತ್ತ ಸೈನಿಕರು, ಡಾ|ಪ್ರಭಾಕರ ಭಟ್‍ಕಲ್ಲಡ್ಕ, ಡಾ|ಕಮಲಾ ಪ್ರಭಾಕರ ಭಟ್, ವಸಂತ ಮಾಧವ ಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರ, ರಮೇಶ್‍ಎನ್ ಸಹಸಂಚಾಲಕರು ಶ್ರೀರಾಮ ವಿದ್ಯಾಕೇಂದ್ರ ಶ್ರೀರಾಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಸಂತಿ ಮಾತಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 10ನೇ ತರಗತಿ ವಿದ್ಯಾರ್ಥಿಗಳು ಭಾರತಮಾತೆಗೆ ಅರ್ಚನೆಗೈದು ಹಿರಿಯರಿಂದ ತಿಲಕಧಾರಣೆ ಹಾಗೂ ಆಶಿರ್ವಾದ ಪಡೆದರು.10ನೇ ತರಗತಿ ವಿದ್ಯಾರ್ಥಿ ಪ್ರಮುಖರು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪಪ್ರದಾನಗೈದು, ಸಂಚಾಲಕರಿಗೆ 2017-18ನೇ ಶೈಕ್ಷಣಿಕ ವರುಷದಕೊಡುಗೆ ನೀಡಿದರು.
ಕಾರ್ಯಕ್ರಮವನ್ನು ಜಿನ್ನಪ್ಪ ಸಹಶಿಕ್ಷಕ ಸ್ವಾಗತಿಸಿದರು. 10ನೇ ತರಗತಿಯ ಹರ್ಷಿತಾ ,ಜಯಂತ ಶೆಟ್ಟಿ ಮತ್ತು 9ನೇ ತರಗತಿಯ ಸುಶ್ಮಿತಾ ಅನಿಸಿಕೆ ವ್ಯಕ್ತಪಡಿಸಿದರು. 9ನೇ ತರಗತಿಯ ವೈಷ್ಣವಿ ಪ್ರಭು ವೈಯಕ್ತಿಕಗೀತೆ ಹಾಡಿದಳು. ಮನೋಜ್ ಸಹಶಿಕ್ಷಕರು ವಂದಿಸಿದರು. ಕಾರ್ಯಕ್ರಮವನ್ನು ಶಾಂಭವಿ ಸಹಶಿಕ್ಷಕಿ ನಿರೂಪಿಸಿದರು.