ಬಂಟ್ವಾಳ: ಜಿಲ್ಲೆಯ ಎಲ್ಲಾ ರಂಗಗಳಲ್ಲೂ ಕೈ ಯಾಡಿಸಿದ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಸರ್ವಕಾಲಿಕ ವ್ಯಕ್ತಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಹೇಳಿದರು. ಡಿ. 16ರಂದು ನಡೆಯಲಿರುವ ಡಾ. ಏರ್ಯ ಸಾಹಿತ್ಯ ಸಂಭ್ರಮ-2017 ನೆನಪಿನ ಏರ್ಯ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.IMG-20171210-WA0177
ಏರ್ಯರ ಕಾರ್ಯ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಅಭಿನಂದನಾರ್ಹಎಂದು ನುಡಿದ ಻ವರು ಬಿಸಿರೋಡಿನಲ್ಲಿ ನಡೆಯಲಿರುವ ಡಾ.ಏರ್ಯ ಸಾಹಿತ್ಯ ಸಂಭ್ರಮವನ್ನು ಸಾರ್ವಜನಿಕರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ಡಾ.ಏರ್ಯ  ಸಾಹಿತ್ಯ ಸಮಿತಿ ಸಂಚಾಲಕ ವಿಶ್ವನಾಥ ಬಂಟ್ವಾಳ, ಹಿರಿಯ ರಂಗಕರ್ಮಿ  ಮಂಜು ವಿಟ್ಲ,  ಮಹಬಲೇಶ್ವರ ಹೆಬ್ಬಾರ್, ಸೇವಾಂಜಲಿ ಪ್ರತಿಷ್ಠಾನದ ಮುಖ್ಯಸ್ಥ  ಕೃಷ್ಣ ಕುಮಾರ್ ಪೂಂಜ ,ಸಂಘಟಕ ಪ್ರೀತಿ ಕಿಶೋರ್, ಸಮಿತಿಯ ಪ್ರಧಾನ ಕಾರ್ಯದರ್ಶಿ   ಫಾರೂಕ್ ಬಂಟ್ವಾಳ ಈ  ಸಂದರ್ಭದಲ್ಲಿ ಹಾಜರಿದ್ದರು.

By Suddi9

Leave a Reply

Your email address will not be published. Required fields are marked *