ಬಂಟ್ವಾಳ: ತಾಲೂಕು ಮಟ್ಟದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಸಂಚಾಲಕರಾಗಿ ಮಕ್ಕಳ ಹಕ್ಕುಗಳ ಸಂಘಟಕ, ಹೋರಾಟಗಾರ, ಲೇಖಕ, ಶಿಕ್ಷಣ ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ಫಾರೂಕ್  ಬಂಟ್ವಾಳ ಅವರು ನೇಮಕ ಗೊಂಡಿದ್ದಾರೆ.

2e0b2f0d-3b1f-49da-a69b-3b3655c5989e ಸಮಿತಿಯ ಸಹ ಸಂಚಾಲಕರಾಗಿ ಉಮೇಶ್ ನಿರ್ಮಲ್, ಸವಿತಾ ನಿರ್ಮಲ್ ಹಾಗೂ ರಾಮರಾಯ ನಾಯಕ್ ಅವರನ್ನು ಆಯ್ಕೆ ಮಾಡಲಾಗಿದೆ. ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ತಡೆಗಟ್ಟುವ ಉದ್ದೇಶದಿಂದ ಕಾರ್ಯಾಚರಿಸುತ್ತಿರುವ ಸಮಿತಿ, ಶಾಲಾ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವ ಸಮಿತಿಗೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾದಲ್ಲಿ ದೂರು ಸಲ್ಲಿಸಬಹುದಾಗಿದೆ ಎಂದು ಸಮಿತಿಯ ಸಂಚಾಲಕರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *