ಬಂಟ್ವಾಳ : ಪ್ರಜಾಪ್ರಭುತ್ವದ ಕಾವಲು ನಾಯಿ ಹಾಗೂ ನಾಲ್ಕನೇ ಅಂಗವಾಗಿರುವ ಪತ್ರಿಕಾ ಮಾಧ್ಯಮದ ಮೇಲೆ ಮುಗಿ ಬೀಳುವ ಮೂಲಕ ಪಟ್ಟಭದ್ರರು ಇಂದು ಅಟ್ಟಹಾಸ ಮೆರೆಯುತ್ತಿರುವುದು ತೀವ್ರ ಆಘಾತಕಾರಿ ಬೆಳವಣಿಗೆ.CFI 2

ಈ ನಿಟ್ಟಿನಲ್ಲಿ ನಾಡಿನ ಹಿರಿಯ ಸಾಹಿತಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಹಾಗೂ ವಾರ್ತಾ ಭಾರತಿ ಬಂಟ್ವಾಳ ವರದಿಗಾರ ಇಂತಿಯಾಝ್ ತುಂಬೆ ಅವರ ಅನ್ಯಾಯದ ಬಂಧನ ವಿರೋಧಿಸಿ ಮತ್ತು ಮಂಗಳೂರು ಚಲೊ ಸಂದರ್ಭ ಮಾಧ್ಯಮ ಕ್ಯಾಮೆರಾಮೆನ್‍ಗಳ ಮೇಲೆ ನಡೆದ ಹಲ್ಲೆ ಪ್ರಕರಣಗಳನ್ನು ವಿರೋಧಿಸಿ ಹಾಗೂ ಅಮಾಯಕರ ಮೇಲೆ ಪೆÇಲೀಸ್ ದೌರ್ಜನ್ಯ ಖಂಡಿಸಿ ಜಾತ್ಯಾತೀತ ಜನತಾದಳ (ಜೆಡಿಎಸ್) ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಸೆಪ್ಟೆಂಬರ್ 11 ರಂದು ಸೋಮವಾರ (ಇಂದು) ಸಂಜೆ 4 ಗಂಟೆಗೆ ಬಿ.ಸಿ.ರೋಡು ಜಂಕ್ಷನ್‍ನಲ್ಲಿ ನಡೆಯಲಿದೆ ಎಂದು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *