ಮುಂಬೈ: ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ಇಬ್ಬರು ಧಾರಾವಾಹಿ ನಟರು ಸೇರಿದಂತೆ ಮೂವರು ಮೃತರಾಗಿರುವ ಘಟನೆ ನಡೆದಿದೆ.
ಕಾರು-ಲಾರಿ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಕಾರು ಛಿದ್ರ-ಛಿದ್ರವಾಗಿದ್ದು, ಅಪಘಾತದ ಭೀಕರತೆ ಎಷ್ಟಿತ್ತು ಎಂಬುದು ಅರಿವಾಗುತ್ತದೆ. ಕಾರಿನ ಮೇಲ್ಭಾಗ ಪೂರ್ತಿ ಛಿದ್ರವಾಗಿದ್ದು, ಕಾರಿನಲ್ಲಿದ್ದ ಇಬ್ಬರು ಟಿವಿ ನಟರು ಸೇರಿದಂತೆ ಮೂವರೂ ಸ್ಥಳದಲ್ಲೇ ಮೃತರಾಗಿದ್ದಾರೆ.
ಕಲರ್ಸ್ ಹಿಂದಿಯಲ್ಲಿ ಪ್ರಸಾರವಾಗುವ ಮಹಾಕಾಳಿ ಧಾರವಾಹಿಯಲ್ಲಿ ಇಂದ್ರನ ಪಾತ್ರಧಾರಿ ಗಗನ್ ಮತ್ತು ನಂದಿ ಪಾತ್ರಧಾರಿ ಅಜೀತ್ ಲಾವಣಿಯ ಮೃತಪಟ್ಟವರು. ಶೂಟಿಂಗ್ ಮುಗಿಸಿಕೊಂಡು ಕಾರಿನಲ್ಲಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಮುಂಬೈ-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇವರ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡು ಲಾರಿಯ ಟ್ರೇಲರ್‌ಗೆ ಗುದ್ದಿದ್ದಾನೆ. ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.
