ಮೂಡುಬಿದಿರೆ: ಎಂ.ಜೆ.ಇಂಪ್ರೆಸ್ ನೃತ್ಯ ತಂಡದ ಪ್ರಥಮ ವಾರ್ಷಿಕೋತ್ಸವವನ್ನು ಮೂಡುಬಿದಿರೆ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ, ಪುರಸಭಾ ಸದಸ್ಯೆ ಸುಪ್ರಿಯಾ ಡಿ. ಶೆಟ್ಟಿ ಉದ್ಘಾಟಿಸಿದರು.
ಜಿಲ್ಲಾ ಯೋಜನಾ ಸಮಿತಿಯ ಸದಸ್ಯ ಸುರೇಶ್ ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ವಿದ್ಯುತ್ತ್ ಗುತ್ತಿಗೆದಾರ ಸತ್ಯಪ್ರಕಾಶ್ ಹೆಗ್ಡೆ, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್‍ನ ನಿವೃತ್ತ ಸಿಇಒ ಪುರುಷೋತ್ತಮ್ ಶೆಟ್ಟಿ, ಪುರಸಭೆ ಸದಸ್ಯ ರಾಜೇಶ್ ಕೋಟೆಗಾರ್ ಉಪಸ್ಥಿತರಿದ್ದರು.

ಸಾಣೂರಿನ ಉದಯ ಶೆಟ್ಟಿ ಅಂಗಡಿಮನೆ ಅವರಿಗೆ ಧನ ಸಹಾಯ ನೀಡಲಾಯಿತು ಹಾಗೂ ಕರಾಟೆಯಲ್ಲಿ ರಾಜ್ಯ ಮಟ್ಟದಲ್ಲಿ ಮಿಂಚಿದ ಅನಿಕೇತ್ ವಿ. ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.

ಕಿರುತೆರೆ ನಟಿ ಚಂದ್ರಕಲಾ ಮೋಹನ್, ನಟರಾದ ಮಂಜು ರೈ, ಸಂದೀಪ್ ಶೆಟ್ಟಿ, ಚಲನಚಿತ್ರ ನಿರ್ದೇಶಕ ರಂಜಿತ್ ಸುವರ್ಣ ಹಾಗೂ ಚಲನಚಿತ್ರ ನಟಿಯರಾದ ಸೋನಾಲ್ ಮೋಂತೆರೋ, ಸ್ವಾತಿ ಬಂಗೇರ, ಸುವರ್ಣ ಶೆಟ್ಟಿ, ರಾಷ್ಟ್ರ ಪ್ರಶಸ್ತಿ ಪುರಸ್ಕøತೆ ಪಂಚಮಿ ಮಾರೂರು, ಖಾಸಗಿ ಚಾನೆಲ್‍ನ ಡ್ಯಾನ್ಸ್ ಮಮ್ಮಿ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತೆ ಸುಮಾ ಗುರುಪ್ರಸಾದ್ ಮತ್ತು ಬಣ್ಣ ಬಣ್ಣದ ಬದುಕು ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮತ್ತು ಬಳಗ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಎಂ. ಜೆ. ಇಂಪ್ರೆಸ್ ಡ್ಯಾನ್ಸ್ ಗ್ರೂಪ್‍ನ ನೃತ್ಯ ನಿರ್ದೇಶಕರು ಅನೀಶ್ ಹಾಗೂ ಸುಕೇಶ್ ಸ್ವಾಗತಿಸಿದರು. ಐಶ್ವರ್ಯ ವೈ. ಜೈನ್ ಹಾಗೂ ವಿ.ಜೆ. ದೀಕ್ಷಿತ್ ಶೆಟ್ಟಿ ನಿರೂಪಿಸಿದರು.
