ಕೈಕಂಬ: ಬಡಗಬೆಳ್ಳೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ನಿವೃತ ಶಿಕ್ಷಕ ಶಿಕ್ಷಕಿಯರ ಅಭಿನಂದನಾ ಸಮಾರಂಭವು ಏ.01 ರಂದು ಶನಿವಾರ ಬಡಗಬೆಳ್ಳೂರು ಶಾಲೆಯ ಸಭಾಂಗಣದಲ್ಲಿ ಜರಗಲಿದೆ.ಬೆಳಗ್ಗೆ ಶಾಲಾ ಮೇಲುಸ್ತುವರಿ ಸಮಿತಿಯ ಅಧ್ಯಕ್ಷ  ಸೀತಾರಾಮ ಶೆಟ್ಟಿ  ಧ್ವಜರೋಹಣ ಮಾಡಲಿದ್ದಾರೆ. ಬಡಗಬೆಳ್ಳೂರು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಬಹುಮಾನ ವಿತರಣೆ ಮಾಡಲಿದ್ದಾರೆ.

* ಅಭಿನಂದನಾ ಸಮಾರಂಭ

ಸಂಜೆ5.30 ರಿಂದ ನಿವೃತಿಗೊಳ್ಳಲಿರುವ ಮುಖ್ಯ ಶಿಕ್ಷಕರಾದ ಶಂಕಪ್ಪ ಶೆಟ್ಟಿ ಹಾಗೂ ಸಹ ಶಿಕ್ಷಕಿಯರಾದ ಲಿಲ್ಲಿ.ಡಿ.ಸೋಜಾ ಅವರನ್ನು ರಾಮಕೃಷ್ಣತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅವರು ಸನ್ಮಾನಿಸಲಿದ್ದಾರೆ ನಾರ್ಶ ಸರಕಾರಿ ಪ್ರೌಡ ಶಾಲಾಶಿಕ್ಷಕಿ ಲತಾ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ ಬಂಟ್ವಾಳ ಎಸ್ ವಿ ಎಸ್ ಕಾಲೇಜು ಡಾ.ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ.ನಂತರ ಬಡಗಬೆಳ್ಳೂರು ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ಹಾಗೂ ತುಳು ನಾಟಕ “ಲಡಾಯಿ ಮಲ್ಪಡೆ” ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.

By Suddi9

Leave a Reply

Your email address will not be published. Required fields are marked *