ಮುಂಬಯಿ,: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾಂಗಳ ಕೆಳಗಿನಮನೆ ಕುಮಾರ್ ಶೆಟ್ಟಿ ಮತ್ತು ಕಲ್ಲಮುಂಡ್ಕೂರು ತತ್ರಾಡಿ ದಿ| ರಾಜೀವಿ ಶೆಟ್ಟಿ ದಂಪತಿ ಸುಪುತ್ರ ಕೆ.ರಾಕೇಶ್ ಶೆಟ್ಟಿ (37.) ಅನಾರೋಗ್ಯದಿಂದ ಕಳೆದ ಮಂಗಳವಾರ (21.3.2017) ಉಪನಗರದ ಗೋರೆಗಾಂವ್ ಪಶ್ಚಿಮದ ಎಸ್‍ಆರ್‍ವಿ ಆಸ್ಪತ್ರೆಯಲ್ಲಿ ನಿಧನರಾದರು.

Rakesh Kumar Shety

ಇಂಟೆಲ್‍ನೆಟ್ ಗ್ಲೋಬಲ್ ಸಂಸ್ಥೆಯಲ್ಲಿ ಸೇವಾ ನಿರತರಾಗಿದ್ದ ರಾಕೇಶ್ ಮಲಾಡ್ ಪಶ್ಚಿಮದ ಮಲ್ವಾಣಿ ಇಲ್ಲಿನ ಜನಕಲ್ಯಾಣ್ ನಗರದ ಬ್ಲೂಬೆಲ್ ನಿವಾಸಿ ಆಗಿದ್ದು ಅವಿವಾಹಿತರಾಗಿದ್ದರು. ಮೃತರು ತಂದೆ, ಸಹೋದರ, ಸಹೋದರಿ, ಬಂಧು-ಬಳಗವನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *