ಗಂಜಿಮಠ ಸಮೀಪದ ಗಾಂಧಿನಗರದ ಪ್ರಾಥಮಿಕ ಶಾಲೆಯ ಆರ್ಥಿಕವಾಗಿ ಹಿಂದುಳಿದ ಪ್ರಾಥಮಿಕ, ಪ್ರೌಢ ಹಾಗೂ ಇತರ ಕಾಲೇಜ್ ವಿದ್ಯಾರ್ಥಿಗಳಿಗೆ ಇಲ್ಲಿನ ಗ್ರಾ.ಪಂ. ಸದಸ್ಯ ಹಾಗೂ ಉಪಾಧ್ಯಕ್ಷ ಜಿ. ಸುನಿಲ್ ಅವರು ತನ್ನ ವತಿಯಿಂದ ಬರೆಯುವ ಪುಸ್ತಕವನ್ನು ಉಚಿತವಾಗಿ ನೀಡಿದರು. ಈ ವೇಳೆ ಸ್ಥಳೀಯರಾದ ಶಶಿಧರ ಪೂಜಾರಿ, ಉಮೇಶ್ ಸನಿಲ್, ರಮೇಶ್ ಸನಿಲ್ ಹಾಗೂ ಯೂಸಫ್ ಬ್ಯಾರಿ ಮೊದಲಾದವರು ಉಪಸ್ಥಿತರಿದ್ದರು .
