ಕೈಕಂಬ:ಹೌದು ಇದು ಕೈಕಂಬ ಸಮೀಪದ ಕಂದಾವಾರ ಗ್ರಾಮದ ಪೌಲಿನ್ ಡಿ ಸೋಜ ಅವರ 101 ನೇ ವರ್ಷದ ಹುಟು ಹಬ್ಬದ ಕ್ಷಣಗಳು ಜೂ. 17ರಂದು ಶುಕ್ರವಾರ ಅವರ ಕಂದಾವರದ ನಿವಾಸದಲ್ಲಿ ಜರಗಿತು. ಕೈಕಂಬದ ಪೊಂಪೈ ಚರ್ಚ್ನ ಗುರುಗಳ ಶುಭಾಶೀರ್ವಾದದೊಂದಿಗೆ ಸಂಭ್ರಮದಿಂದ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಪೌಲಿನ ಡಿ” ಸೋಜರ ಪತಿ ದಿವಂಗತ ಪೆಲಿಕ್ಷ್ ಡಿ ಸೋಜ. ವರು ಹಾಗೂ ಇವರ ಮಗ ದಿ. ಗ್ರೆಗೋರಿ ಡಿ ಸೋಜ ಮೊದಲೇ ದೇವರಪಾದ ಸೇರಿದ್ದಾರೆ.

ಈಗಿನ ದಿನಗಳಲ್ಲಿ ಒಬ್ಬ ಮನುಷ್ಯನು 50ರಿಂದ 70 ವರ್ಷ ಆದಾಗ ತನ್ನ ಆಯುಷ್ಯವನ್ನು ಕಳೆದುಕೊಳ್ಳುತ್ತಾರೆ ಇದಕ್ಕೆ ಕಾರಣ ಆಹಾರ ಪದ್ದತಿ ಯೇ ಅಥವಾ ಆಧುನಿಕರಣವಾಗಿರಬಹುದು. ಆದರೆ ಅಜ್ಜಿಯು 101 ನೇ ವರ್ಷಕ್ಕೆ ಕಾಲಿಟ್ಟ ಈ ಸಂತೋಷದ ದಿನಗಳನ್ನು ಇವರ ಮೊಮ್ಮಕ್ಕಳು ತಮ್ಮ ಕುಟುಂಬದೊಂದಿಗೆ ಅಜ್ಜಿಯ ಹುಟ್ಟು ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿದರು. ಅವರ ಸೊಸೆ ಸೆಲಿನ್ ಡಿ”ಸೋಜ ಹಾಗೂ ಮೊಮ್ಮಕಳಾದ ಸುಜೀತ್ ಡಿ’ ಸೋಜ, ಸುನೀಲ್ ಡಿ” ಸೋಜ, ಒನಿಲ್ ಡಿ” ಸೋಜ, ಅನಿಲ್ ಡಿ” ಸೋಜ, ವೀಣಾ ಡಿ” ಸೋಜ, ಜ್ಯೋತಿ ಡಿ” ಸೋಜ ಅವರು ಹುಟ್ಟು ಹಬ್ಬವನ್ನು ಆಚರಿಸಿದರು. ಪೌಲಿಯ ಡಿ ಸೋಜ ಅವರು ಐದು ತಲೆಮಾರಿನ ಕುಟುಂಬ ಹೊಂದಿದ್ದು ಅವರ ಮಕ್ಕಳು ವಿದೇಶದಲ್ಲಿಯೂ ಬೇರೆ ಬೇರೆ ಊರಿನಲ್ಲಿದ್ದು ಅವರ ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳಲಾಗದೆ ದೂರದಿಂದಲೆ ಆಶೀರ್ವಾದ ಬೇಡಿ ಶುಭಕೋರಿದ್ದಾರೆ.
ಜೂ.19ರಂದು ಭಾನುವಾರ ಪೊಂಪೈ ಚರ್ಚ್ ನ ಗುರುಗಳಾದ ಆಂಟನಿ ಲೋಬೊ ಅವರು ಪೌಲಿನ್ ಡಿ”ಸೋಜ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ನಿಮ್ಮ ಜೀವನವು ಆರೋಗ್ಯದಿಂದ ಸುಖವಾಗಿರಿ ಎಂದು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಮಾಜಿ ತಾ. ಪಂ. ಸದಸ್ಯ ಹಾಗೂ ಚರ್ಚ್ ನ ಪಾಲನಾ ಸಮಿತಿ ಉಪಾಧ್ಯಕ್ಷ ಜಾನ್ಸನ್ ಲೊಬೊ, ಲಿಲ್ಲಿ ಮಥಾಯಿಸ್, ಪೊಂಪೈ ಕ್ಲೋತ್ ಸ್ಟೋರ್ ಇದರ ಮಾಲಕ ಜೆರಾಲ್ಡ್ ರೆಸ್ಕಿನ್ ,ವಿನ್ಸಂಟ್ ಡಿ. ಸೋಜ, ವಿಲ್ಪಿಡ್ ಪಿಂಟೊ ಮತ್ತಿತರು ಇದ್ದರು. ಪೊಂಪೈ ಕಾನ್ವೆಂಟ್ ಇದರ ಭಗಿನಿಯರು ಶುಭಕೋರಿದರು.







