ಮುಂಬೈ: ಪ್ಲೀಸ್ ನನ್ನ ಆ ದೃಷ್ಟಿಯಲ್ಲಿ ನೋಡಬೇಡಿ, ಈಗ ನಾನು ಅದನ್ನೆಲ್ಲಾ ಬಿಟ್ಟಿದ್ದೇನೆ. ಈಗೇನಿದ್ದರೂ ಬಾಲಿವುಡ್ ನಲ್ಲಿ ಬ್ಯುಸಿ ಆಗಿದ್ದೇನೆ ಎಂದು ಪೋರ್ನ್ ತಾರೆ ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ. ಪೋರ್ನ್ ಪ್ರಪಂಚ ಬಿಟ್ಟು ಬಾಲಿವುಡ್ನಲ್ಲಿ ನಟಿಯಾಗಿ ಬೆಳೆಯುವ ಮಹತ್ವಾಕಾಂಕ್ಷೆ ಹೊಂದಿರುವ ಸನ್ನಿ ಲಿಯೋನ್’ಗೆ ಈಗೀಗ ಹಳೆಯ ಬ್ಲೂಫಿಲಂ ಭೂತ ಕಾಡುತ್ತಿದೆಯಂತೆ..! ಸಂಸ್ಕೃತಿ ರಕ್ಷಕರೆನಿಸಿಕೊಂಡವರು ಸನ್ನಿ ಲಿಯೋನ್’ಗೆ ಸಿಕ್ಕಾಪಟ್ಟೆ ತೊಂದರೆ ಕೊಡುತ್ತಾರಂತೆ. ನಟಿಯಾಗಿ ಬೆಳೆಯಬೇಕೆಂದಿರುವ ತನಗೆ ಇಂಥ ವರ್ತನೆಗಳಿಂದ ಘಾಸಿಯಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

sunny sunny2 sunny3
“ಪ್ರತಿಯೊಬ್ಬರಿಗೂ ಹಿನ್ನೆಲೆ ಇದ್ದೇ ಇರುತ್ತದೆ…. ನಾವೆಲ್ಲಾ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಬೆಳೆಯುತ್ತೇವೆ. ನಾನೂ ಕೂಡ ನನ್ನ ಜೀವನದಲ್ಲಿ ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಸಹಜವಾಗೇ ಸಾಗಿದ್ದೇನೆ ಎಂದು ಕೆಲ ಜನರಿಗೆ ಯಾಕೆ ಅರ್ಥವಾಗುತ್ತಿಲ್ಲ..?” ಎಂದು ಸನ್ನಿ ಪರಿತಪಿಸುತ್ತಾಳೆ.

“ಬಾಲಿವುಡ್ ನಟಿಯಾಗಿ ವೃತ್ತಿಜೀವನ ನಡೆಸಲು ಬಹಳ ಶ್ರಮ ಪಡುತ್ತಿದ್ದೇನೆ. ಆ ದಾರಿಯಲ್ಲಿ ಇನ್ನೂ ಸಾಕಷ್ಟು ದೂರ ಸವೆಸಬೇಕಿದೆ. ಜನರು ನನ್ನ ಉದ್ದೇಶಗಳನ್ನ ಅರಿತುಕೊಂಡರೆ ಚಂದ” ಎನ್ನುತ್ತಾಳೆ ಈಕೆ..
ನ್’ಗೆ ಈಗ ಮುಂಬೈ ನಗರಿಯೇ ತವರಂತಾಗಿಬಿಟ್ಟಿದೆಯಂತೆ. ಇಲ್ಲೇ ಮನೆ, ಕಾರು, ಸಿಬ್ಬಂದಿ ಎಲ್ಲವನ್ನೂ ಇಟ್ಟುಕೊಂಡಿರುವ ಸನ್ನಿ ಲಿಯೋನ್’ಗೆ ಮುಂಬೈ ನಗರವೇ ತನ್ನ ಸ್ವಂತ ಊರಾಗಿದೆ. ಅಮೆರಿಕಕ್ಕೆ ಹೋದರೂ ಒಬ್ಬ ಪ್ರವಾಸಿಗಳಂತೆ ಹೋಗಿಬರುತ್ತಾಳಂತೆ… ಹೀಗಂತ ಮುಂಬೈ ಬಗ್ಗೆ ಸನ್ನಿ ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ.

By suddi9

Leave a Reply

Your email address will not be published. Required fields are marked *