- ಸುದ್ದಿ9 ಪೊಳಲಿ: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾ ಮಹೋತ್ಸವ ಏ.11ರಂದು ಸಂಜೆ ಘಂಟೆ 7ಕ್ಕೆ ಮಹಾರಥೋತ್ಸವ ನಡೆಯಿತು. ಪೂರ್ವಾಹ್ನ ದೇವರಲ್ಲಿ ವಿಧಿವತ್ತಾಗಿ ಪ್ರಾರ್ಥಿಸಿ ಮಹಾಪೂಜೆ ಆದ ಬಳಿಕ ರಥಾರೋಹಣವಾಗುತ್ತದೆ. ತದಾ ನಂತರ ರಥವನ್ನು ಸಾಂಕೇತಿಕವಾಗಿ ಎಳೆಯುವುದು. ಸಂಜೆ ಮಹಾರಥದಲ್ಲಿ ದೇವರಿಗೆ ಪೂಜೆಯಾದ ಬಳಿಕ ಗುತ್ತಿನವರಿಂದ ಹಾಗೂ ಭಕ್ತಾಭಿಮಾನಿಗಳಿಂದ ತೆಂಗಿನ ಕಾಯಿ ಒಡೆದು ದೇವಸ್ಥಾನದ ಹೊರಾಂಗಣದ ರಥಬೀದಿಯಲ್ಲಿ ರಥವನ್ನು ಒಂದು ಸುತ್ತು ಎಳೆಯಲ್ಪಟ್ಟು ಚೆಂಡಿನಗದ್ದೆಯಲ್ಲಿ ರಥವನ್ನು ನಿಲ್ಲಿಸಿ ವಿಶೇಷವಾದ ಸಿಡಿಮದ್ದಿನ ಸುಡುವಿಕೆ ವಿಜೃಂಭಣೆಯಿಂದ ನೆರವೇರಿತು.

ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆ ಗುತ್ತು ಡಾ. ಮಂಜಯ್ಯ ಶೆಟ್ಟಿ, ಮೊಕ್ತೆಸರರಾದ ಯು. ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣರಾವ್, ಪವಿತ್ರಪಾಣಿ ಮಾಧವ ಭಟ್, ಕಾರ್ಯನಿರ್ವಹಣಾಧಿಕಾರಿ ಹರಶ್ಚಂದ್ರ, ಉಳಿಪಾಡಿಗುತ್ತು ರಾಜೇಶ್ ನಾಯಕ್, ಸೇಸಪ್ಪ ಕೋಟ್ಯಾನ್ ಪಚಿನಡ್ಕ , ತಂತ್ರಿಗಳಾದ ವೆಂಕಟೇಶ್, ಸುಬ್ರಹ್ಮಣ್ಯ, ಗಿರೀಶ್ ಅರ್ಚಕರಾದ ರಾಮ್ ಭಟ್, ಪರಮೇಶ್ವರ ಭಟ್ , ನಾರಾಯಣ ಭಟ್, ಅನಂತ ಭಟ್, ರಾಜಾ ಭಟ್, ಮಾದವ ಮಯ್ಯ, ವಿಷ್ಣಮೂರ್ತಿ ಭಟ್, ವಾಸುದೇವ ಭಟ್, ಸ್ವಾಮಿ ವಿವೇಕಚ್ಯತನ್ಯಾನಂದ,ಕೃಷ್ಣಕುಮಾರ್ ಪೂಂಜ, ಸಂಪತ್ ಕುಮಾರ್ ಶೆಟ್ಟಿ,ದೇವ್ ದಾಸ್ ಹೆಗ್ಡೆ,ಅಮ್ಮುಂಜೆ ಗುತ್ತಿನವರು, ಉಳಿಪಾಡಿಗುತ್ತಿನವರು, ಮೊಗರು ಗುತ್ತಿನವರು ಹಾಗೂ ಸಾವಿರ ಸೀಮೇಯ ಭಕ್ತಾಧಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.























