ಬಂಟ್ವಾಳ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿಯ 7ನೇ ತರಗತಿ ವಿದ್ಯಾರ್ಥಿಗಳನ್ನು ಮುಂದಿನ ವಿದ್ಯಾಭ್ಯಾಸಕ್ಕಾಗಿ ಆಶೀರ್ವದಿಸಿ ಬೀಳ್ಗೊಡುವ ದೀಪಪ್ರದಾನ ಕಾರ್ಯಕ್ರಮ ಮಾ.20 ಶುಕ್ರವಾರದಂದು ದವ್ಯಾಸ ಧ್ಯಾನಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮದ ಅತಿಥಿಗಳಾದ ಶ್ರೀಯುತ ಆನಂದ ನಾಯ್ಕ, ಬೋಗೋಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶ್ರೀರಾಮ ಶಾಲೆಯ ಹಿರಿಯ ವಿದ್ಯಾರ್ಥಿಗಳು ಇವರು ಮಾತನಾಡುತ್ತಾ ಜ್ಞಾನ ಸಂಪಾದನೆಯ ಜೊತೆಗೆ ಸಂಸ್ಕಾರವನ್ನು ಅರಿತುಕೊಂಡಿರಬೇಕು ಅಂತಹ ಸಂಸ್ಕಾರಯುತ ಶಿಕ್ಷಣ ಇಲ್ಲಿ ದೊರೆಯುತ್ತಿದೆ ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ನುಡಿದರು.
ಶ್ರೀರಾಮ ವಿಧ್ಯಾಕೇಂದ್ರದ ಸಂಚಾಲಕರಾದ ಶ್ರೀಯುತ ಪ್ರಭಾಕರ ಭಟ್ ಕಲ್ಲಡ್ಕ ಇವರು ನಮ್ಮ ಶಾಲೆಯಲ್ಲಿ ಕಲಿತಿರುವಂತಹ ನೈತಿಕ ಶಿಕ್ಷಣ, ಸಂಸ್ಕಾರಗಳನ್ನು ಮುಂದೆಯು ತಮ್ಮ ಜೀವನದಲ್ಲಿ ಅಳವಡಿಸುವುದರ ಮೂಲಕ ಸಮಾಜದಲ್ಲಿ ಬೆಳೆದು ಸಮಾಜಮುಖಿ ಕಾರ್ಯಗಳನ್ನು ಮಾಡಿ ಉತ್ತಮ ಜೀವನ ನಡೆಸಿ ಎಂದು ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೊಮಯಜಿ, ಶ್ರೀಮತಿ ಕಮಲಾ ಪ್ರಭಾಕರ ಭಟ್, ಶ್ರೀರಾಮ ಕಾಲೇಜು ವಿಭಾಗದ ಉಪನ್ಯಾಸಕರಾದ ಕು.ಶೈಲಿನಿ ಮಾತಾಜಿ, ಶಶಿಕಲಾ ಮಾತಾಜಿ, ಪ್ರಾಥಮಿಕ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಯುತ ಶಿವಗಿರಿ ಸತೀಶ್ ಭಟ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರದೀಪ್ ಪ್ರಭು 6ನೇ ತರಗತಿ ಸ್ವಾಗತಿಸಿ, ಶ್ರೀಲಕ್ಷ್ಮೀ 6ನೇ ತರಗತಿ ವಂದಿಸಿ, ಅರ್ಚನಾ 6ನೇ ತರಗತಿ ನಿರೂಪಿಸಿದಳು.
