ಬಂಟ್ವಾಳ: ಸ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ಮಾ.18 ಬುಧವಾರ 2014-15ನೇ ಸಾಲಿನ ವೀರಕಂಭ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಗ್ರಾಮ ಸಭೆ ಜರಗಿತು.

ಸಭಾಧ್ಯಕ್ಷತೆಯನ್ನು ಗ್ರಾಮ ಪಂಚಾಯತ್‍ನ ಅಧ್ಯಕ್ಷೆ ಶ್ರೀಮತಿ ಆಶಾಲತಾರವರು ವಹಿಸಿದ್ದರು. ಉಪಾಧ್ಯಕ್ಷೆ ಶ್ರೀಮತಿ ಚಂದ್ರಿಕಾ ಸದಸ್ಯರಾದ ಶ್ರೀಯುತ ಮೋನಪ್ಪ, ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಶಕುಂತಳಾ ಎಂ.ಬಿರವರು ಭಾಗವಹಿಸಿದ್ದರು.
ಸರಕಾರದಿಂದ ದೊರಕುವ ಮೀಸಲಾತಿ, ಮಾಹಿತಿ ಹಕ್ಕು ವಿದ್ಯಾರ್ಥಿ ವೇತನ, ಸಮವಸ್ತ್ರ, ಕ್ಷೀರ ಭಾಗ್ಯದ ಹಕ್ಕು ಶೋಷಣೆಯ ವಿರುದ್ಧ ಧ್ವನಿಯೆತ್ತುವ ಹಕ್ಕು ಮುಂತಾದವುಗಳೆಲ್ಲಾ ಮಕ್ಕಳ ದನಿಯಾಗಬೇಕು ತಮ್ಮ ಸಮಸ್ಯೆಯನ್ನು ಎತ್ತಿ ಹಿಡಿದು ನ್ಯಾಯ ಪಡೆಯುವಲ್ಲಿ ವಿದ್ಯಾರ್ಥಿಗಳು ಹಿಂಜರಿಯಬಾರದೆಂದು ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿಯವರಾದ ಶ್ರೀಮತಿ ಸುನೀತಾರವರು ತಿಳಿಸಿದರು.
ಸರಕಾರಿ ವಿದ್ಯಾರ್ಥಿಗಳಾದ ವಿದ್ಯಾಳು ನಿಗದಿತ ಸ್ಥಳದಲ್ಲಿ ಬಸ್ ನಿಲುಗಡೆ ನೀಡದಿರುವ ಬಗ್ಗೆ ಮನ್ವಿತಾಳು ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟದ ಕುರಿತು ಕುಸುಮಾವತಿಯು ಶಾಲಾ ಆವರಣದ ಬಳಿ ಇರುವ ವಿದುತ್ ಕಂಬದಲ್ಲಿನ ವಿದ್ಯುತ್ ವ್ಯತ್ಯಯದ ಅಪಾಯಕಾರಿ ಶಾರ್ಟ್ ಸಕ್ರ್ಯೂಟ್ ವಿಚಾರವಾಗಿ, ದೀಕ್ಷಾಳು ಕಲ್ಲಿನ ಕೋರೆಯಿಂದುಂಟಾಗುವ ಶಬ್ದ ಮಾಲಿನ್ಯ, ಮಹಮ್ಮದ್ ತಾಜುದ್ದೀನ್ ರಸ್ತೆಗೆ ಶಾಲಾ ಗೇಟಿನಬಳಿ ಉಬ್ಬು ನಿರ್ಮಾಣ ಹಾಗೂ ಶಾಲಾವಠಾರ, ಶಬ್ದ ಮಾಡದಿರುವ ಕುರಿತು ಫಲಕ ಹಾಕುವಂತೆ ಮನವಿ ಮಾಡಿದರು.
ಸದಸ್ಯರಾದ ಶ್ರೀಯುತ ವೀರಪ್ಪರವರು ಮಕ್ಕಳ ಸಮಸ್ಯೆಗೆ ಸ್ಪಂದಿಸಿ ಇಲಾಖೆಯ ಗಮನಕ್ಕೆ ತರುವುದು ಹಾಗೂ ಮುಂದಿನ ಸಭೆಯಲ್ಲಿ ಫಲಶ್ರುತಿಯನ್ನು ನೀಡುವ ಕುರಿತು ಭರವಸೆಯನ್ನಿತ್ತರು.
ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆಯಮೂಲಕ ಕಾರ್ಯಕ್ರಮಕ್ಕೆ ಛಾಲನೆ ದೊರಕಿತು ಗ್ರಾಮ ಪಂಛಾಯತ್ ಲೆಕ್ಕ ಸಹಾಯಕಿ ಶ್ರೀಮತಿ ಗ್ರೆಸ್ಸರವರು ಸ್ವಾಗತಿಸಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾರವರು ಧನ್ಯವಾದಗಳನ್ನು ನೀಡಿದರು.
