ಬಂಟ್ವಾಳ: ನಮ್ಮ ಗ್ರಾಮ – ನಮ್ಮ ರಸ್ತೆ ಯೋಜನೆಯಲ್ಲಿ ನಿರ್ಮಿಸಲಾದ ಮಂಚಿ ಗ್ರಾಮದ ಪುದ್ದೋಟ್ಟು – ನೂಜಿ ರಸ್ತೆಯನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮಹಮ್ಮದ್, ತಾಲೂಕು ಪಂಚಾಯತ್ ಸದಸ್ಯೆ ಲವೀನಾ ಡಿ’ ಸೋಜಾ, ಪಂಚಾಯತ್ ಅಧ್ಯಕ್ಷ ಶ್ರೀಪತಿರಾವ್, ಜಿ.ಎಂ.ಇಬ್ರಾಹಿಂ ಡಿ.ಕೆ.ಹಂಝ, ಪ್ರಮುಖರಾದ ಅಬ್ಬಾಸ್ ಆಲಿ, ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.

