ಬಂಟ್ವಾಳ: ಕಳೆದ 30 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕ್ರತಿಕ , ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ 31ನೇ ಸಂಭ್ರಮಾಚರಣೆಯ ಪ್ರಯುಕ್ತ 7ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮಾ.8ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಜರಗಲಿರುವುದಾಗಿ ಕ್ಲಬ್ನ ಸ್ಥಾಪಕಾಧ್ಯಕ್ಷ , ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಎಂ.ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.
ಅವರು ಮಾ.1ರಂದು ಪುಂಜಾಲಕಟ್ಟೆಯ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು. ಅತೀ ಬಡವರು ಕೂಡಾ ವಿಜೃಂಭಣೆಯಲ್ಲಿ ವಿವಾಹವಾಗುವಂತೆ ಸಾಮೂಹಿಕ ವಿವಾಹ ಅವಕಾಶ ನೀಡಿದೆ. ಇದು ಬಡವರಿಗೆ ನೀಡುವ ಗೌರವವಾಗಿದೆ ಎಂದ ಅವರು ಈಗಾಗಲೇ 10 ಜೋಡಿ ವಧು-ವರರನ್ನು ಆಯ್ಕೆ ಮಾಡಲಾಗಿದ್ದು ವಿವಾಹದ ಪೂರ್ವಭಾವಿಯಾಗಿ ತುಳುನಾಡಿನ ಸಂಪ್ರದಾಯದಂತೆ ವಧು-ವರರ ನಿಶ್ಚಿತಾರ್ಥ ನಡೆಸಿ ವಧು-ವರರಿಗೆ ಮಂಗಳವಸ್ತ್ರ ನೀಡಲಾಗಿದೆ. ಜೊತೆಗೆ ಚಿನ್ನದ ತಾಳಿ ಮತ್ತು ಸರಕಾರದ ಪ್ರೋತ್ಸಾಹಧನ ನೀಡಲಾಗುವುದು ಎಂದು ವಿವರಿಸಿದರು.
ದಿಬ್ಬಣ ಮೆರವಣಿಗೆ : ಬೆಳಗ್ಗೆ 9 ಗಂಟೆಗೆ ಮೂರ್ಜೆಯಿಂದ ಹಿಂದೂ ಜಾಗರಣ ವೇದಿಕೆ ಮತ್ತು ಪೆಲತ್ತಕಟ್ಟೆ ಯಕ್ಷಗಾನ ಸಮಿತಿ ನೇತೃತ್ವದಲ್ಲಿ ಶ್ರೀ ಬಸವೇಶ್ವರ ದೇವಾಲಯದ ವರೆಗೆ ವಧುವಿನ ದಿಬ್ಬಣ ಬಳಿಕ ಅಲ್ಲಿಂದ ಮದುವೆ ಮಂಟಪದವರೆಗೆ ವಧು-ವರರ ದಿಬ್ಬಣ ಮೆರವಣಿಗೆ ವಿವಿಧ ಸ್ತಬ್ಧ ಚಿತ್ರ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾತಂಡಗಳೊಂದಿಗೆ ಕೇರಳ ಚೆಂಡೆಗಳ ಆಕರ್ಷಣೆಯೊಂದಿಗೆ ವೈಭವಪೂರ್ವಕವಾಗಿ ಸಾಗಿ ಬರಲಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ದಿಬ್ಬಣಕ್ಕೆ ಚಾಲನೆ ನೀಡಲಿರುವರು.
ವಿವಾಹ : ಮುಂಬೈ ಉದ್ಯಮಿ ಮುನ್ನಾಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಅವರ ಸಾರಥ್ಯದಲ್ಲಿ , ಗುರುವಾಯನಕೆರೆ ಕೃಷ್ಣಭಟ್ ಅವರ ಪೌರೋಹಿತ್ಯದಲ್ಲಿ , ಮಧ್ಯಾಹ್ನ 12.20ರ ವೃಷಭ ಲಗ್ನದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರಧಾನ : ಕೇಂದ್ರ ಸರಕಾರದ ಬೃಹತ್ ಕೈಗಾರಿಕಾ ಸಚಿವ ಜಿ.ಎಂ.ಸಿದ್ದೇಶ್ ಹಾಗೂ ಮುಂಬಯಿ ಉದ್ಯಮಿ ರಘು ಎಲ್.ಶೆಟ್ಟಿ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿರುವರು. ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಲಿರುವರು. ಸಂಸದ ನಳಿನ್ ಕುಮಾರ್ ಕಟೀಲು ಅವರು ಶುಭಾಶಂಸನೆ ನೀಡಲಿರುವರು. ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಲಿರುವರು. ವಿಧಾನ ಪರಿಷತ್ ಸದಸ್ಯ ಕ್ಯಾ|ಗಣೇಶ್ ಕಾರ್ಣಿಕ್, ಉದ್ಯಮಿಗಳಾದ ಸುಂದರ್ ರಾಜ್ ಹೆಗ್ಡೆ , ಜಿತೇಂದ್ರ ಎಸ್.ಕೊಟ್ಟಾರಿ, ದಿನೇಶ್ ಅಮೀನ್, ಮಂಜುನಾಥ್ ಬನ್ನೂರು, ಸುರೇಶ್ ಯೆಯ್ಯಾಡಿ ಮುಂಬಯಿ, ರೋಹಿನಾಥ್ ಪಾದೆ, ಹರೀಶ್ ಕುಮಾರ್ ಪೂಜಾರಿ, ನಾಗೇಶ್ ಎಂ.ಕೋಟ್ಯಾನ್, ಬಂಟ್ವಾಳ ರೋಟರಿ ಅಧ್ಯಕ್ಷ ಪ್ರಕಾಶ್ ಕಾರಂತ್, ಉದಯ ಕುಮಾರ್ ಕಟ್ಟೆ ಮನೆ ಮತ್ತು ಸಹೋದರರು, ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಅಧ್ಯಕ್ಷ ಸುಂದರ ನಾಯ್ಕ್ , ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಭಾರತಿ ಶೆಟ್ಟಿ , ತಾ.ಪಂ.ಸದಸ್ಯ ರಮೇಶ್ ಕುಡ್ಮೇರ್ ಅತಿಥಿಗಳಾಗಿ ಭಾಗವಹಿಸಲಿರುವರು.
ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ : ದೇವೇಂದ್ರ ಹೆಗ್ಡೆ ,ಕೊಕ್ರಾಡಿ (ಉದ್ಯಮ ಕ್ಷೇತ್ರ), ಪಟ್ಲ ಸತೀಶ್ ಶೆಟ್ಟಿ (ಯಕ್ಷಗಾನ ಕ್ಷೇತ್ರ), ಸದಾಶಿವ ಶಾಂತಿ(ಧಾರ್ಮಿಕ ಕ್ಷೇತ್ರ), ಸ್ವರ್ಣಲತಾ ಹೆಗ್ಡೆ (ಸಮಾಜ ಸೇವೆ), ಮೈಲಾರಿ ತಿಪಟೂರು(ಸಮಾಜಸೇವೆ),
ಸ್ವಸ್ತಿ ಸಿರಿ ಸಂಭ್ರಮ ಪ್ರಶಸ್ತಿ : ಗೋಪಾಲ ಬಂಗೇರ ಮಧ್ವ(ಕಲಾ ಕ್ಷೇತ್ರ), ವೆಂಕಟೇಶ ಶೆಟ್ಟಿ ಮೂರ್ಜೆ(ಯಕ್ಷಗಾನ-ಹಿಮ್ಮೇಳ), ವೆಂಕಪ್ಪ ನಲಿಕೆ ಕುಂಟಾಲ್ಪಲ್ಕೆ(ಜಾನಪದ), ರಮೇಶ್ ಮಾಸ್ಟರ್ ಪುಂಜಾಲಕಟ್ಟೆ(ಶಿಕ್ಷಣ ಕ್ಷೇತ್ರ), ಸಿಲ್ವೆಸ್ಟರ್ ಪಿಂಟೊ ನಯನಾಡು( ಉದ್ಯಮಿ ಕ್ಷೇತ್ರ)
ಅತ್ಯುತ್ತಮ ಯುವ ಸಂಘಟನೆಯ ಸೇವೆಗಾಗಿ ಪುರಸ್ಕಾರ: ಶ್ರೀ ಮುರುಘೇಂದ್ರ ಮಿತ್ರ ಮಂಡಳಿ, ಪುಂಜಾಲಕಟ್ಟೆ , ಸೂರ್ಯ ಫ್ರೆಂಡ್ಸ್ ಬಡಗುಂಡಿ.
ಸಾಂಸ್ಕ್ರತಿಕ ಕಾರ್ಯಕ್ರಮ: ಮಧ್ಯಾಹ್ನ 2.30ರಿಂದ ಪೆರ್ಡೂರು ಮೇಳದವರಿಂದ ಗದಾಯುದ್ಧ ಯಕ್ಷಗಾನ, ಸಂಜೆ ಸಾಂಸ್ಕ್ರತಿ ವೈವಿಧ್ಯ ನೃತ್ಯ ಕಾರ್ಯಕ್ರಮ, ಬಳಿಕ ಸಾರಥಿ ಕಲಾವಿದರಿಂದ ಬದ್ಕೆರೆ ಬುಡ್ಲೆ ತುಳು ನಾಟಕ ಪ್ರದರ್ಶನವಿದೆ.
ಕ್ಲಬ್ ಅಧ್ಯಕ್ಷ ಪ್ರಶಾಂತ ಪುಂಜಾಲಕಟ್ಟೆ , ಗೌರವಾಧ್ಯಕ್ಷ ಅಬ್ದುಲ್ಲ ಪಿ., ಕಾರ್ಯದರ್ಶಿ ಜಯರಾಜ್ ಅತ್ತಾಜೆ, ಮಾಜಿ ಅಧ್ಯಕ್ಷರಾದ ಪ್ರಭಾಕರ ಪಿ.ಎಂ., ಜಯಂತ ಭಂಡಾರಿ, ಪ್ರಮುಖರಾದ ಸಂತೋಷ್ ಮೂರ್ಜೆ, ಮಂಜಪ್ಪ ಮೂಲ್ಯ , ಡೀಕಯ್ಯ ಬಂಗೇರ, ಗಿರೀಶ್ ಎಚ್., ಹರೀಶ್ಚಂದ್ರ ಶೆಟ್ಟಿಗಾರ್, ದಿನೇಶ್ ನಾಯಕ್, ಜೇಮ್ಸ್ ಸುನಿಲ್ ಅಂಚನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
