ಸುರತ್ಕಲ್: ಸುರತ್ಕಲ್ ಕಾಲೇಜ್‍ನ ತೊಡೆಯಲ್ಲಿ ಪವಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಅದರ ಮುಂದುವರಿದ ಭಾಗವಾಗಿ ಫೋಟೋದಲ್ಲಿ ಕಾಣಿಸಿಕೊಂಡಿದ್ದ ರಿಯಾಝ್ ಮೇಲೆ ದುಷ್ಕರ್ಮಿಗಳು ಗಂಭೀರವಾದ ಹಲ್ಲೆ ನಡೆಸಿದ್ದರು.
ಈತನಿಗೆ ಹಲ್ಲೆ ನಡೆಸಿದವರ ಪೈಕಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ವ್ಯಕ್ತವಾಗಿದೆ. ಆದರೆ ಅವರೆಲ್ಲಾ ಯಾರು ಎಂಬುವುದನ್ನು ತಿಳಿಸಲು ಪೊಲೀಸ್ ಮೂಲಗಳ ತಿಳಿಸಲು ನಿರಾಕರಿಸಿದೆ.
ಇಂದು ಸಂಜೆ ಅವರೆಲ್ಲರ ಹೆಸರುಗಳು ಬಹಿರಂಗವಾಗುವ ಸಾಧ್ಯತೆ ಇದ್ದು, ಅಲ್ಲದೆ ಫೇಸ್‍ಬುಕ್, ವಾಟ್ಸಾಪ್‍ಗಳಲ್ಲಿ ಅಪ್‍ಲೋಡ್ ಮಾಡಿದವರ ಮೇಲೂ ಪ್ರಕರಣ ಬಿಗಿಯಾಗುವ ಸಾಧ್ಯತೆ ಇದೆ.
