ಬಂಟ್ವಾಳ: ತಾಲ್ಲೂಕಿನ ಪಿಲಿಂಗಾಲು ಶ್ರೀ ಗಾಯತ್ರೀ ದೇವಿ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಉತ್ಸವ ಬುಧವಾರ ರಾತ್ರಿ ನಡೆದ ವಿಶೇಷ ಪೂಜೆ ಮತ್ತು ರಂಗಪೂಜೆಯೊಂದಿಗೆ ಸಮಾಪನಗೊಂಡಿತು. ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್ ಮತ್ತಿತರರು ಇದ್ದರು. ಇದೇ ವೇಳೆ ನೃತ್ಯ ಭಜನೆ ಮತ್ತುಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

