ಬಂಟ್ವಾಳ:ತಾಲೂಕಿನ ನೆಟ್ಲ ಶ್ರೀ ನಿಟಿಲಾಕ್ಷ ಸದಾಶಿವ ದೇವರ ಲಕ್ಷ ದೀಪೋತ್ಸವದ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಮೂರ್ತಿ ಪೂಜೆಗೊಳ್ಳುವಅಮ್ಟೂರಿನ ಅಶ್ವತ್ಕಟ್ಟೆಯನ್ನು ಪುನರ್ ನಿರ್ಮಾಣಗೊಳಿಸುವ ನಿಟ್ಟಿನಲ್ಲಿ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.

ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಬಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿಸಲಾಯಿತು.
ಮೋಹನರಾಜ ಚೌಟ ಪುoಜಲ್ ಮಾರ್ ಗುತ್ತು, ಬಂಟ್ವಾಳ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ದಿನೇಶ್ ಅಮ್ಟೂರು,ರತ್ನಾಕರ ಪಡೀಲ್ ,ಸಂಜೀವ ಪೂಜಾರಿ ಅಮ್ಟೂರು,ಕೃಷ್ಣಪ್ಪ ಕುಲಾಲ್, ಶರತ್ ಕುಮಾರ್, ವೇಣುಗೋಪಾಲ ,ಹರೀಶ್ ,ಅನಿಲ್ , ಸುಂದರ ಶಾಂತಿ ಪಾಲಿಕೆ ,ಕೃಷ್ಣಪ್ಪ ಆಚಾರ್ಯ,ಮೋನಪ್ಪ ಆಚಾರ್ಯ ಕುಂಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ,ಧನಂಜಯ ರೈ,ಮಹಾಬಲ ಸಾಲಿಯಾನ್ ಮುಳಿ ಕೊಡಂಗೇ ಮೊದಲಾದವರು ಉಪಸ್ಥಿತರಿದ್ದರು.
