ಬಂಟ್ವಾಳ: ಖಿನ್ನತೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ

ಬಂಟ್ವಾಳ: ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ ತಾವ್ರೋ ( 37) ಖಿನ್ನತೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೀವನ್ ಅವರು ಅಗಾಗ ಸ್ನೇಹಿತ ರೊಂದಿಗೆ ಪ್ರವಾಸಕ್ಕೆ ಹೋಗುತ್ತಿದ್ದರು. ಜೀವನ್ ತಾವ್ರೋ ಅವರಿಗೆ ಅಗಾಗ ಕಾಲ್ ಮೆಸೇಜ್ ಬರುತ್ತಿದ್ದು,ಅದೇ ಕಾರಣಕ್ಕಾಗಿ ಖಿನ್ನತೆಗೊಳಗಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೆಯವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.