“ಸಾಧನಾ ಶ್ರೀ 2025” ಪ್ರಶಸ್ತಿಗೆ ಶಿಕ್ಷಕಿ ಸುಧಾ ನಾಗೇಶ್ ರವರು ಆಯ್ಕೆ
ಬಂಟ್ವಾಳ: ದಿವಂಗತ ಎ ಶಾಮರಾವ್ ಸ್ಮರಣಾರ್ಥ ಶ್ರೀನಿವಾಸ ಯೂನಿವರ್ಸಿಟಿ ಮತ್ತು ಶ್ರೀನಿವಾಸ ಸಮೂಹ ಸಂಸ್ಥೆಯವರು ಅತ್ಯುತ್ತಮ ಶಿಕ್ಷಕರಿಗೆ ನೀಡುವ “ಸಾಧನಾ ಶ್ರೀ 2025” ಪ್ರಶಸ್ತಿಗೆ ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಶಿಕ್ಷಕಿಸುಧಾ ನಾಗೇಶ್ ರವರು ಆಯ್ಕೆಯಾಗಿದ್ದಾರೆ.

ಮುಕ್ಕ ಶ್ರೀನಿವಾಸ ಕಾಲೇಜಿನಲ್ಲಿ ಫೆ.14 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ
ಮಂಗಳೂರು ದೇರೆಬೈಲ್ ಕೊಂಚಾಡಿಯ ನಿವಾಸಿಯಾಗಿರುವ ಶಿಕ್ಷಕಿ ಸುಧಾ ನಾಗೇಶ್ ಅವರು ಕಳೆದ 35 ವರುಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಬಂಟ್ವಾಳ ತಾಲೂಕಿನ ಶ್ರೀ ಶಾರದಾ ಪ್ರೌಢಶಾಲೆ ಪಾಣೆಮಂಗಳೂರು ಸಮಾಜ, ವಿಜ್ಞಾನ ಮತ್ತು ಆಂಗ್ಲ ಭಾಷೆಯನ್ನು ಬೋಧಿಸುತ್ತಿದ್ದಾರೆ.ಇವರು ಎಂಟು ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ಉತ್ತಮ ಶಿಕ್ಷಕಿ ಪ್ರಶಸ್ತಿ,ಸಾವಿತ್ರಿ ಬಾಯಿ ಫುಲೆ ಪ್ರಶಸ್ತಿ, ನೆಚ್ಚಿನ ಶಿಕ್ಷಕರು ಪ್ರಶಸ್ತಿ, ಪ್ರಥಮ ಮಹಿಳಾ ಸಾಧನ ಶಿಕ್ಷಕಿ ಪ್ರಶಸ್ತಿ, ಹಿಮಾಲಯ ವುಡ್ ಬ್ಯಾಜ್ ಪ್ರಶಸ್ತಿ ,ಚೈತನ್ಯ ಶ್ರೀ ಪ್ರಶಸ್ತಿ, ಉತ್ತಮ ಗೈಡರ್ ಪ್ರಶಸ್ತಿ ,ಸಾಹಿತ್ಯ ರತ್ನ ಪ್ರಶಸ್ತಿ, ಶಿಕ್ಷಾ ರತ್ನ ಪ್ರಶಸ್ತಿ, ಕಲಾ ರತ್ನ ಪ್ರಶಸ್ತಿ,ಸಂಘಟನಾ ಶಿಕ್ಷಕಿ ಪ್ರಶಸ್ತಿ,ಕರ್ನಾಟಕ ಯುವರತ್ನ ಪ್ರಶಸ್ತಿ,ಬಾಲ ಬಂಧು ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಮಂಗಳೂರು ಆಕಾಶವಾಣಿ ಸೇರಿದಂತೆ ನೂರಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.