ಗುರುಪುರ ವ್ಯ.ಸೇ.ಸ. ಸಂಘದ ಚುನಾವಣೆಯಲ್ಲಿ
ಬಿಜೆಪಿ ಬೆಂಬಲಿತ ಎಲ್ಲ ೧೨ ಮಂದಿಗೆ ಬಹುಮತ
ಕೈಕಂಬ: ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ರಿ) ಇದರ ಆಡಳಿತ ಮಂಡಳಿಗೆ ಫೆ. ೪ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ನಡೆದ ಚುನಾವವಣೆಯಲ್ಲಿ ಬಿಜೆಪಿ ಬೆಂಬಲಿತ ಎಲ್ಲ ೧೨ ಮಂದಿ ಅಭ್ಯರ್ಥಿಗಳು ಬಹುಮತ ಗಳಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತ ತಲಾ ೧೨ ಹಾಗೂ ನಾಲ್ವರು ಪಕ್ಷೇತರ ಅಭ್ಯರ್ಥಿಗಳ ಸಹಿತ ಒಟ್ಟು ೨೮ ಮಂದಿ ಚುನಾವಣಾ ಕಣದಲ್ಲಿದ್ದರು.

ಕಳೆದ ೫ ವರ್ಷಗಳ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಓಂ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆಯ ನಿರ್ದೇಶಕ ಮಂಡಳಿ ಕಾರ್ಯ ನಿರ್ವಹಿಸುತ್ತ ಬಂದಿದ್ದು, ಮುಂದಿನ ೫ ವರ್ಷಗಳ ಅವಧಿಗೆ ೧೨ ಮಂದಿ ನಿರ್ದೇಶಕರ ಮಂಡಳಿಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ತೀವ್ರ ಸ್ಪರ್ಧೆ ನೀಡಿದ್ದರು.

ಕಾನೂನು ತೊಡಕು ಇರುವುದರಿಂದ ಚುನಾವಣಾಧಿಕಾರಿಯವರು ಚುನಾವಣಾ ಫಲಿತಾಂಶದ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ವಿಜಯಿ ಅಭ್ಯರ್ಥಿಗಳ ಬೆಂಬಲಿಗರು ಸುಡುಮದ್ದು ಸಿಡಿಸಿ, ಸಿಹಿತಿಂಡಿ ಹಂಚಿ ಸಂಭ್ರಮಿಸಿದರು.
ಚುನಾವಣೆಗೆ ಸ್ಪರ್ಧಿಸಿರುವ ಸಾಮಾನ್ಯ ಸ್ಥಾನದ ಜಿ. ಎಂ. ಉದಯ ಭಟ್, ಓಂ ಪ್ರಕಾಶ್ ಶೆಟ್ಟಿ, ದಿನೇಶ್ ಜೆ. ಕರ್ಕೇರ, ಪದ್ಮನಾಭ ಆಳ್ವ ಕೆ, ಶೀನ ಕೋಟ್ಯಾನ್ ಜಿ, ಮಹಿಳಾ ಮೀಸಲು ಸ್ಥಾನದ ನಳಿನಾಕ್ಷಿ ಶೆಟ್ಟಿ, ಲತಾ ಆರ್. ಶೆಟ್ಟಿ, ಹಿಂದುಳಿದ ವರ್ಗ ಎ' ಸ್ಥಾನದ ಕಿಶೋರ್ ಕುಮಾರ್, ಹಿಂದುಳಿದ ವರ್ಗ
ಬಿ’ ಸ್ಥಾನದ ಸಚಿನ್ ಕುಮಾರ್ ಅಡಪ, ಪರಿಶಿಷ್ಟ ಜಾರಿ ಮೀಸಲು ಸ್ಥಾನದ ನಾಗಪ್ಪ ಬಿ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದ ರಾಜೇಶ್ ಮತ್ತು ಸಾಲಗಾರರಲ್ಲದ ಸ್ಥಾನದ ಶ್ರೀನಿವಾಸ ಸುವರ್ಣ ಮಲ್ಲೂರು ಬಹುಮತ ಗಳಿಸಿದ್ದಾರೆ.
ಗುರುಪುರ, ಅಡ್ಡೂರು, ಉಳಾಯಿಬೆಟ್ಟು, ಕೆತ್ತಿಕಲ್, ಬೊಂಡAತಿಲ ಮತ್ತಿತರ ವ್ಯಾಪ್ತಿ ಒಳಗೊಂಡಿರುವ ಸಂಘದ ಚುನಾವಣೆಗಾಗಿ ಮತ ಚಲಾಯಿಸಲು ಬೆಳಿಗ್ಗಿನಿಂದಲೇ ಭಾರೀ ಸಂಖ್ಯೆ ಸದಸ್ಯರು ಸರದಿಯಲ್ಲಿ ನಿಂತಿದ್ದರು. ಸಂಜೆ ೪ ಗಂಟೆಗೆ ಮತ ಎಣಿಕೆ ಆರಂಭಗೊAಡಿದ್ದು, ೭ ಗಂಟೆಗೆ ಎಣಿಕೆ ಕಾರ್ಯ ಮುಕ್ತಾಯಗೊಂಡಿತು.