ಪುರಸಭೆಗೆ ಉಪಚುನಾವಣೆ: ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಕೆ,ವಾಡ್೯ 2 ಸೀಮಿತವಾದ ನೀತಿ ಸಂಹಿತೆ
ಬಂಟ್ವಾಳ: ಎಂಟು ತಿಂಗಳ ಅವಧಿಗಾಗಿ ಬಂಟ್ವಾಳ ಪುರಸಭೆಯ ವಾಡ್೯ 2 ಕ್ಕೆ ತೆರವಾಗಿರುವ ಒಂದು ಸ್ಥಾನಕ್ಕೆ ನ.23 ರಂದು ನಡೆಯುವ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಪುರುಷೋತ್ತಮ ಎಸ್ ಬಂಗೇರ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.

ಚುನಾವಣಾಧಿಕಾರಿಯಾದ ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುನೀಲ್ ಡಿಸೋಜ ಅವರು ನಾಮಪತ್ರ ಸ್ವೀಕರಿಸಿದರು. ಉಪಚುನಾವಣಾಧಿಕಾರಿ ತಾ.ಪಂ.ನ ಸಹಾಯಕ ನಿರ್ದೇಶಕರಾದ ವಿಶ್ವನಾಥ್ ಹಾಗೂ ಪುರಸಭಾ ಮೆನೇಜರ್ ರಜಾಕ್ ಉಪಸ್ಥಿತರಿದ್ದರು.
ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಲಕೃಷ್ಣ ಅಂಚನ್,ಪುರಸಭಾಧ್ಯಕ್ಷ ವಾಸುಪೂಜಾರಿ ಲೊರೆಟ್ಟೋ,ಬೂಡಾ ಅಧ್ಯಕ್ಷರಾದ ಬೇಬಿ ಕುಂದರ್ ವಲಯ ಕಾಂಗ್ರೆಸ್ ಅಧ್ಯಕ್ಷರಾದ ರಾಜೇಶ್ ರೋಡ್ರಿಗಸ್, ಲೋಕೇಶ್ ಕುಲಾಲ್ ಉಪಸ್ಥಿತರಿದ್ದರು.
ನ. 11 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ. 12ರಂದು ನಾಮಪತ್ರ ಪರಿಶೀಲನೆ, ನ. 14ಕ್ಕೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.ನ.23 ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ, ನ. 25 ಅವಶ್ಯವಿದ್ದರೆ ಮರು ಮತದಾನಕ್ಕೆ ದಿನ ಮೀಸಲಿಡಲಾಗಿದ್ದು,ನ. 26ಕ್ಕೆ ತಾಲೂಕು ಕೇಂದ್ರದಲ್ಲಿ ಮತ ಎಣಿಕೆ ನಡೆಯಲಿದೆ.
ಬಂಟ್ವಾಳ ಪುರಸಭೆಯ ವಾರ್ಡ್ 2ರಲ್ಲಿ ಎರಡು ಬಾರಿ ಕಾಂಗ್ರೆಸ್ ಸದಸ್ಯರಾಗಿದ್ದ ಗಂಗಾಧರ್ ಅವರು ಕಳೆದ ಲೋಕಸಭಾ ಚುನಾವಣೆಯ ವೇಳೆ ಪಕ್ಷ ತೊರೆದು ಬಿಜೆಪಿ ಸೇರಿದ್ದರು, ಬಳಿಕ ತಮ್ಮ ಸದಸ್ಯ ಸ್ಥಾನಕ್ಕು ರಾಜೀನಾಮೆ ನೀಡಿದ್ದರು. ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದೆ.
ನೀತಿ ಸಂಹಿತಿ:
ಉಪಚುನಾವಣೆಯ ಹಿನ್ನಲೆಯಲ್ಲಿ ವಾಡ್೯ ಸಂಖ್ಯೆ 2 ರ ವ್ಯಾಪ್ತಿಗೆ ಸೀಮಿತವಾಗಿ ಮಾತ್ರ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ.ಉಳಿದಂತೆ ಪುರಸಭಾ ವ್ಯಾಪ್ತಿಯ ಇತರೆ ವಾಡ್೯ ಗೆ ಉಚುನಾವಣೆಯ ಮಾದರಿ ನೀತಿ ಸಂಹಿತೆ ಅನ್ವಯವಾಗುವುದಿಲ್ಲ.