Published On: Wed, Nov 6th, 2024

 ಎಡನೀರು ಸ್ವಾಮೀಜಿ  ಕಾರಿಗೆ‌  ಅಡ್ಡಿ .ಖಂಡನೀಯ

ಬಂಟ್ವಾಳ : ಸುಮಾರು ೧೩೦೦ ವರ್ಷಗಳ ಹಿನ್ನೆಲೆಯ ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಕಾರಿಗೆ ದುಷ್ಕರ್ಮಿಗಳು ಅಡ್ಡಿಪಡಿಸಿದ ಕಿಡಿಗೇಡಿ ಕೃತ್ಯ ಖಂಡನೀಯ ಎಂದು ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೈಯೂರು ನಾರಾಯಣ  ಭಟ್ ಆಕ್ರೋಶ  ವ್ಯಕ್ತ ಪಡಿಸಿದ್ದಾರೆ.

ಅವರು ಬಿ.ಸಿ.ರೋಡ್ ನ ಪತ್ರಿಕಾ ಭವನದಲ್ಲಿ ಬುಧವಾರ ಶ್ರೀ ಕ್ಷೇತ್ರ ಎಡನೀರು ಮಠದ ಭಕ್ತಾಭಿಮಾನಿಗಳ ಬಳಗ ಬಂಟ್ವಾಳ ಇವರು ಏರ್ಪಡಿಸಿದ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಸರಗೋಡು ಎಡನೀರು ಮಠವು ತನ್ನದೇ ಆದ ವಿಶಿಷ್ಠ ಪರಂಪರೆ ಹೊಂದಿದ್ದು  ಎಲ್ಲಾ ಜಾತಿ,ಮತ,ಸಂಪ್ರದಾಯಗಳನ್ನು  ಗೌರವಿಸುವ ಹಿನ್ನೆಲೆ ಹೊಂದಿದೆ.  ಮುಖ್ಯ ಕಾರ್ಯಕ್ರಮವೊಂದರಲ್ಲಿ  ಭಾಗವಹಿಸುವ ಸಲುವಾಗಿ ಸ್ವಾಮೀಜಿಯವರು ತೆರಳುತ್ತಿರುವುದನ್ನು ಕಂಡು ದುರುದ್ದೇಶ ಪೂರ್ವಕವಾಗಿ ‌ ಆಕ್ರಮಣಕಾರಿ ರೀತಿಯಲ್ಲಿ ಕಾರಿಗೆ ಹಾನಿಗೊಳಿಸಿ ಬೆದರಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಈ ಮಠಕ್ಕೆ ಮುಸಲ್ಮಾನರು ಸಹಿತ ದೇಶದ ವಿವಿಧೆಡೆ ಭಕ್ತರಿದ್ದು ಇಲ್ಲಿನ ಉತ್ಸವಾದಿಗಳಿಗೆ ದೇಣಿಗೆ ಹೊರೆಕಾಣಿಕೆ ಸಮರ್ಪಿಸುತಿದ್ದಾರೆ.ಲಕ್ಷಾಂತರ ಮಠದ ಅಭಿಮಾನಿಗಳಿಗೆ ಈ ಘಟನೆಯಿಂದ  ಖೇದವಾಗಿದೆ ಎಂದು‌ ತಿಳಿಸಿದರು. ಕನ್ನಡ ಭಾಷಾ ಸಾಹಿತ್ಯ,ಯಕ್ಷಗಾನ ಹಾಗೂ ವಿವಿಧ ಕಲೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀ ಮಠಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಅವರು ಎಂದು‌ಆಗ್ರಹಿಸಿದರು. 

ಪತ್ರಿಕಾ ಗೋಷ್ಠಿಯಲ್ಲಿ ಪ್ರತಿಷ್ಠಾನದ ಕೋಶಾಧಿಕಾರಿ ಅನಾರು ಕೃಷ್ಣ ಶರ್ಮ,ಜಿಲ್ಲಾ ಪ್ರತಿನಿಧಿ ರಾಜಮಣಿ ರಾಮ ಕುಂಜ,ಬಂಟ್ವಾಳ ತಾಲೂಕು‌ ಅಧ್ಯಕ್ಷ ಸುಬ್ರಾಯ ಮಡಿವಾಳ,ಕಾರ್ಯದರ್ಶಿ ಕೋಕಳ ರಾಮಕೃಷ್ಣ ನಾಯಕ್  ಹಾಗೂ ಡಾ.ಮಹಾಲಿಂಗ ಭಟ್,ನ್ಯಾಯವಾದಿ ರವೀಂದ್ರ ಕುಕ್ಜಾಜೆ,ಶೇಖರ ಮಂಚಿ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter