“ತುಳುನಾಡ ಸತ್ಯೊಲು ಕಾನದ ಕಟದೆರ್” ತುಳು ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ
ಬಂಟ್ವಾಳ: ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.), ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ನವೆಂಬರ್ ೧೦ ರಂದು ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿರುವ ಆದಿದ್ರಾವಿಡ ಸಮಾಜ ಬಾಂಧವರ ಆರಾಧನಾ ಶಕ್ತಿಗಳಾದ “ಶ್ರೀ ಸತ್ಯಸಾರಮಾನಿ ಕಾನದ ಕಟದರ” ಸಂಪೂರ್ಣ ಇತಿಹಾಸವನ್ನು ಸಾರುವ ಪ್ರಪ್ರಥಮ ಬಾರಿಗೆ “ತುಳುನಾಡ ಸತ್ಯೊಲು ಕಾನದ ಕಟದೆರ್” ತುಳು ಯಕ್ಷಗಾನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಬಿ.ಸಿ.ರೋಡ್ ರಿಕ್ಷಾ ಭವನದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ (ರಿ.), ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಅರ್ಬಿಗುಡ್ಡೆ ಇವರ ಸಭಾಧ್ಯಕ್ಷತೆ ವಹಿಸೊದ್ದರು.ಬಂಟ್ವಾಳ ಪುರಸಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್ ,ಸಂಘದ ರಾಜ್ಯ ಜೊತೆ ಕಾರ್ಯದರ್ಶಿ ತನಿಯಪ್ಪ ಪಡ್ಡಾಯೂರು, ಬಂಟ್ವಾಳ ತಾಲೂಕು ಘಟಕದ ಗೌರವಾಧ್ಯಕ್ಷರಾದ ಧರ್ಣಪ್ಪ ಬಡಗಬೆಳ್ಳೂರು, ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಸುನಿಲ್ ಕಂಕನಾಡಿ, ಮೂಡಬಿದ್ರೆ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀನಿವಾಸ್ ಪಾಳ್ಯ,ಕಾರ್ಯಕ್ರಮ ಸಂಯೋಜಕರಾದ ಗಣೇಶ್ ಪ್ರಸಾದ್ ಮೂಡಬಿದ್ರೆ, ಸತೀಶ್ ಅರಳ ,ಪ್ರಮುಖರಾದ ರಾಜೀವ್ ಕಕ್ಕೆಪದವು, ಜಯ ಪುತ್ತೂರು, ರಾಜ ಚೆಂಡ್ತಿಮಾರ್, ವೆಂಕಟೇಶ್ ಕೃಷ್ಣಾಪುರ, ಮೋಹನ್ ಬಡಗಬೆಳ್ಳೂರು, ರಾಮ ಚೆಂಡ್ತಿಮಾರ್, ಲಕ್ಷ್ಮಣ ಚೆಂಡ್ತಿಮಾರ್, ಮೋಹನ್ ವಾಮದಪದವು, ಸಂದೀಪ್ ಕಂಕನಾಡಿ, ನವೀನ್ ಸರಪಾಡಿ, ರತೀಶ್ ಸರಪಾಡಿ, ಆನಂದ ಕೆದ್ದಳಿಕೆ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಘಟಕದ ಪ್ರ. ಕಾರ್ಯದರ್ಶಿ ಹರೀಶ್ ಕುಮಾರ್ ಕಡೇಶಿವಾಲಯ ಸ್ವಾಗತಿಸಿ,ವಂದಿಸಿದರು.