ಉಮೇಶ್ ನಿರ್ಮಲ್ ನಿಧನ
ಬಂಟ್ವಾಳ : ಬಿ.ಸಿ.ರೋಡಿನ ಉದ್ಯಮಿ, ಜೋಡುಮಾರ್ಗ ನೇತ್ರಾವತಿ ಜೇಸಿ, ಬಂಟ್ವಾಳ ರೋಟರಿ ಟೌನ್ ಪೂರ್ವಾಧ್ಯಕ್ಷರೂ ಆಗಿದ್ದ ನಿರ್ಮಲ್ ಎಸೋಸಿಯೇಟ್ಸ್ ಮಾಲಕರಾದ ಉಮೇಶ್ ನಿರ್ಮಲ್ (53) ಅವರು ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.

ದಿಢೀರ್ ಎದೆನೋವು ಕಾಣಿಸಿಕೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಪರೀಕ್ಷಿಸಿದ ವೈದ್ಯರು ಅಸುನೀಗಿರುವುದಾಗಿ ತಿಳಿಸಿದರು.
ಜಿಲ್ಲಾ ಜುವಿನೈಲ್ ಜಸ್ಟೀಸ್ ಬೋರ್ಡ್ ಜೀವ ವಿಮಾ ನಿಗಮ ಕ್ಲಬ್ ಸದಸ್ಯ ಪರಿಸರಾಸಕ್ತರ ಒಕ್ಕೂಟ ಐಸಿಐ ರೋಟರಿ ಹಾಗೂ ವಿವಿದ ಸಮಾಜ ಮುಖಿ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿದವರಾಗಿರುತ್ತಾರೆ.
ಅವರು ಪತ್ನಿ ,ಒರ್ವ ಪುತ್ರ ಹಾಗೂ ಒರ್ವ ಪುತ್ರಿ ಸಹಿತ ಬಂಧುಮಿತ್ರರನ್ನು ಅಗಲಿರುತ್ತಾರೆ.