ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ
ಬಂಟ್ವಾಳ: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ( ರಿ )ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ವೇದವ್ಯಾಸ ರಾಮಕುಂಜ ಅವರ ನಿವಾಸದಲ್ಲಿ ಜರಗಿತು.

ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿ ತಾಲೂಕು ಘಟಕಗಳ ಸಮಿತಿಯ ಪುನರ್ ರಚನೆ,ಕೇಂದ್ರ ಸಮಿತಿಯ ಸಭೆಗೆ ಗೈರು ಹಾಜರಾಗುತ್ತಿರುವ ಪದಾಧಿಕಾರಿಗಳ ಬದಲಾವಣೆ,ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ, ಡಿಸೆಂಬರ್ ನಲ್ಲಿ ನಡೆಯಲಿರುವ ತೃತೀಯ ವಾರ್ಷಿಕೋತ್ಸವದ ಕುರಿತು ಚರ್ಚಿಸಲಾಯಿತು.
ತಾಲೂಕ ಘಟಕದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಕೇಂದ್ರಸಮಿತಿಯ ಪ್ರತಿ ತಿಂಗಳ ಸಭೆಯಲ್ಲಿ ಪ್ರತಿನಿಧಿಗಳಾಗಿ ತಪ್ಪದೆ ಹಾಜರಿರುವಂತೆ ತೀರ್ಮಾನಿಸಲಾಯಿತು.
ಪ್ರತಿಷ್ಠಾನದ ಗೌರವಾಧ್ಯಕ್ಷ ಎ .ವಿ ನಾರಾಯಣ , ಮಹಿಳಾ ಪ್ರತಿನಿಧಿ ಪ್ರೊ.ವತ್ಸಲಾ ರಾಜ್ನಿ,ಸಹ ಸಂಚಾಲಕ ಭಾಸ್ಕರ ಬಾರ್ಯ, ಅನಾರು ಕೃಷ್ಣಶರ್ಮ, ಗುಂಡ್ಯಡ್ಕ ಈಶ್ವರ ಭಟ್, ಚಂದ್ರಶೇಖರ ಆಳ್ವ ಪಡುಮಲೆ, ಭವಾನಿ ಶಂಕರ ಶೆಟ್ಟಿ ಪುತ್ತೂರು, ಉದಯಶಂಕರ ರೈ ಪುಣಚ, ರಾಜಮಣಿ ರಾಮಕುಂಜ ಬಂಟ್ವಾಳ, ಸೀತಾರಾಮ.ಕೆ, ಸೋಮನಾಥ ಬೇಕಲ್, ಜಯಾನಂದ ಪೆರಾಜೆ, ಚಂದ್ರಕಲಾ ಎಸ್.ಬಿ ಭಾಗವಹಿಸಿದ್ದರು.
ಉಪಾಧ್ಯಕ್ಷ ಲೋಕೇಶ್ ಹೆಗ್ಡೆ ಸ್ವಾಗತಿಸಿ ಪ್ರೊ. ವೇದವ್ಯಾಸ ವಂದಿಸಿದರು.