ಅಂಚೆ ಜನ ಸಂಪರ್ಕ ಅಭಿಯಾನ ಬೃಹತ್ ಆಧಾರ್ ನೋಂದಣಿ, ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮೆ
ಬಂಟ್ವಾಳ : ಅಂಚೆ ಇಲಾಖೆ ಜನರ ಜೀವನಾಡಿಯಾಗಿ ಜನರ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಸರಕಾರದ ಹೊಸ ಯೋಜನೆಗಳನ್ನು ಅಂಚೆ ಕಚೇರಿ ಜನರಿಗೆ ಮನೆ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಕೊಳ್ಳಬೇಕು ಎಂದು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಕಚೇರಿಯ ಹಿರಿಯ ಅಂಚೆ ಅಽಕ್ಷಕ ಜಿ.ಹರೀಶ್ ಅವರು ಹೇಳಿದರು.
ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಕಚೇರಿ ವತಿಯಿಂದ ಪುಂಜಾಲಕಟ್ಟೆ ಉಪ ಅಂಚೆ ಕಚೇರಿ, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಮತ್ತು ಶ್ರೀ ಮುರುಘೇಂದ್ರ ವನಿತಾ ಸಮಾಜದ ಸಹಕಾರದಲ್ಲಿ ಮಿತ್ರ ಮಂಡಲಿ ಸಭಾಭವನದಲ್ಲಿ ಮಂಗಳವಾರ ನಡೆದ ಅಂಚೆ ಜನ ಸಂಪರ್ಕ ಅಭಿಯಾನವನ್ನು ಉದ್ಘಾಟಿಸಿ, ಅಪಘಾತ ವಿಮೆ ಪರಿಹಾರ ಧನ ಚೆಕ್ ವಿತರಿಸಿ ಅವರು ಮಾತನಾಡಿದರು.
ಅಂಚೆ ಕಚೇರಿ ಜನ ಸಂಪರ್ಕ ಅಭಿಯಾನದ ಮೂಲಕ ಉಳಿತಾಯ ಖಾತೆ, ಐಪಿಬಿಪಿ ಖಾತೆ,ಆಧಾರ್ ನೋಂದಣಿ, ತಿದ್ದುಪಡಿ, ಅಂಚೆ ಜೀವ ವಿಮೆ, ಸುಕನ್ಯಾ ಸಮೃದ್ಧಿ ಯೋಜನೆಗಳನ್ನು ನೀಡುವ ಕಾರ್ಯ ನಡೆಸುತ್ತಿದೆ. ಇದಕ್ಕೆ ಸಹಕಾರ ನೀಡುವ ಸಂಘ ಸಂಸ್ಥೆಗಳು ಅಭಿನಂದನೀಯರು ಎಂದರು.
ಅಂಚೆ ಇಲಾಖೆ ಬಂಟ್ವಾಳ ಜೋಡುಮಾರ್ಗ ಉಪವಿಭಾಗದ ಉಪ ಅಂಚೆ ಸಹಾಯಕ ಪ್ರಹ್ಲಾದ್ ನಾಯಕ್ ಅವರು ಅಂಚೆ ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು. ಪುತ್ತೂರು ಉಪ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗುರುರಾಜ್ ಅವರು ಅಂಚೆ ಅಪಘಾತ ಜೀವ ವಿಮೆ ಸವಲತ್ತುಗಳ ಮಾಹಿತಿ ನೀಡಿ, ಕೇವಲ ೫೪೯ ರೂ. ವೆಚ್ಚದಲ್ಲಿ ೧೦ ಲಕ್ಷ ರೂ.ಗಳ ಅಪಘಾತ ವಿಮೆ ಸೌಲಭ್ಯ ಪಡೆಯಬಹುದು ಎಂದರು. ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕುರ್ಡುಮೆ,
ಶ್ರೀ ಮುರುಘೇಂದ್ರ ವನಿತಾ ಸಮಾಜದ ಅಧ್ಯಕ್ಷೆ ಪುಷ್ಪಲತಾ ಮೋಹನ್, ಐಪಿಬಿಪಿ ಮೇನೇಜರ್ ಶ್ರೇಯಸ್, ಬಜಾಜ್ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಽಕಾರಿ ಪ್ರತೀಕಾ, ಮೇನೇಜರ್ ಆನಂದ್, ಪುಂಜಾಲಕಟ್ಟೆ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ರಾಜೇಶ್ ಬಿ., ಸಿಬಂದಿ ಪುಷ್ಪಲತಾ ಮಹೇಶ್, ಆನಂದ ಶೆಟ್ಟಿ, ಉದಯ್ ಕುಮಾರ್, ಪಿಲಾತಬೆಟ್ಟು ಪ್ರಾ.ಕೃ.ಸ.ಸಂಘದ ಮುಖ್ಯ ಕಾರ್ಯ ನಿರ್ವಹಣಾಽಕಾರಿ ಬಬಿತಾ ದಿನೇಶ್, ಮಿತ್ರ ಮಂಡಳಿ, ವನಿತಾ ಸಮಾಜದ ಪದಾಽಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟ ರಂಗಭೂಮಿ ಕಲಾವಿದ ದಿ. ಗೌತಮ್ ವಗ್ಗ ಅವರ ಕುಟುಂಬಕ್ಕೆ ಅಂಚೆ ಕಚೇರಿ ಅಪಘಾತ ವಿಮಾ ಪರಿಹಾರ ಧನ ೧೦ ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು.
ಮಿತ್ರಮಂಡಳಿ ಗೌರವಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮೇಲ್ಮನೆ ಸ್ವಾಗತಿಸಿದರು. ಅಂಚೆ ಕಚೇರಿ ಸಿಬಂದಿ ರಾಜೇಶ್ ವಂದಿಸಿದರು. ಸುಜೀತ್ ಕಾರ್ಯಕ್ರಮ ನಿರೂಪಿಸಿದರು.
—