ಪಾಣೆಮಂಗಳೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಂಟ್ವಾಳ : ಪಾಣೆಮಂಗಳೂರಿನ ಶ್ರೀ ಶಾರದಾ ಪೂಜಾ ಶತಮಾನೋತ್ಸವದ ಪ್ರಯುಕ್ತ ಎಸ್.ವಿ.ಟಿ ಫ್ರೆಂಡ್ಸ್ ಪಾಣೆಮಂಗಳೂರು ಹಾಗೂ ಏ.ಜೆ ವೈದ್ಯಕೀಯ ಮಹಾವಿದ್ಯಾಲಯ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಪಾಣೆಮಂಗಳೂರಿನ ಸುಮಂಗಲಾ ಕಲ್ಯಾಣ ಮಂಟಪದಲ್ಲಿ ನಡೆಯಿತು.
ಶ್ರೀ ಶಾರದಾ ಪೂಜಾ ಶತಮಾನೋತ್ಸವದ ಸಮಿತಿಯ ಗೌರವಾಧ್ಯಕ್ಷರಾದ ಯೋಗೀಶ್ ಪೈ ಶಿಬಿರವನ್ನು ಉದ್ಘಾಟಿಸಿದರು ಸಮಿತಿಯ ಅಧ್ಯಕ್ಷರಾದ ಪ್ರಮೋದ್ ಭಟ್, ಉಪಾಧ್ಯಕ್ಷರಾದ ಪಾಂಡುರಂಗ ಪ್ರಭು , ವೀರ ವಿಠಲ ದೇವಸ್ಥಾನದ ಮೊಕ್ತಸರರಾದ ಶ್ರೀ ವೈಕುಂಠ ಕುಡ್ವರವರು ಉಪಸ್ಥಿತರಿದ್ದರು
ಏ.ಜೆ ಆಸ್ಪತ್ರೆಯ ವೈದ್ಯರಾದ ಡಾ. ವಾಮನ್ ನಾಯಕ್ ಹಾಗೂ ಡಾ.ಜಯಮಾಲ ವಿಶ್ವನಾಥ್ ಹಾಗೂ ಇತರ ತಜ್ಞ ವೈದ್ಯರು ಆರೋಗ್ಯ ಶಿಬಿರವನ್ನು ನಡೆಸಿಕೊಟ್ಟರು.