ಉಡುಪಿ: ಮೂರು ದಿನ ಕಳೆದರು ಪತ್ತೆಯಾಗಿಲ್ಲ ಕರುಣಾಕರ ಶೆಟ್ಟಿ ರುಂಡ
ಕಳಿಹಿತ್ಲುವಿನ: ಗುಮ್ಮಾಡಿ ಗ್ರಾಮದ ಕರುಣಾಕರ ಶೆಟ್ಟಿ (72) ಎಂಬವರ ರುಂಡವಿಲ್ಲದ ದೇಹ ಸಿಕ್ಕಿದೆ. ಈ ದೇಹ ಗುಜ್ಜಾಡಿ ಗ್ರಾಮದ ಕಳಿಹಿತ್ಲುವಿನ ಪಂಚಗಂಗಾವಳಿ ಹೊಳೆಯಲ್ಲಿ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರುಣಾಕರ ಶೆಟ್ಟಿ, ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಈ ಹಿಂದೆ ದೇಹ ಮಾತ್ರ ಪತ್ತೆಯಾಗಿತ್ತು ತಲೆ ಮಾತ್ರ ಪತ್ತೆಯಾಗಿಲ್ಲ. ಇದೀಗ ರುಂಡಕ್ಕಾಗಿ ಪತ್ತೆ ಕಾರ್ಯ ನಡೆಯುತ್ತಿದೆ.
ಗಂಗೊಳ್ಳಿ ಠಾಣಾ ಪೊಲೀಸರ ಈ ಬಗ್ಗೆ ತನಿಖೆಯನ್ನು ನಡೆಸಿದರು. ಗಂಗೊಳ್ಳಿ ಎಸ್‌ಐ ಹರೀಶ್ ಆರ್. ಅವರ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆಸಲಾಗಿತ್ತು. ಸ್ಥಳೀಯ ಮುಳುಗು ತಜ್ಞ ದಿನೇಶ್ ಖಾರ್ವಿ ಅವರ ಸಹಾಯದಿಂದ ಈ ಪತ್ತೆ ಕಾರ್ಯಚರಣೆಯನ್ನು ನಡೆಸಲಾಗಿತ್ತು. ಈ ಶೋಧ ಕಾರ್ಯದಲ್ಲಿ ಸ್ಥಳೀಯ ಮೀನುಗಾರರು ಸಹ ಭಾಗಿಯಾದರು. ದೋಣಿಯ ಮೂಲಕವೂ ರುಂಡಕ್ಕಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ಇದೀಗ ಸಾವಿಗೆ ಕಾರಣವೇನು ಎಂಬ ಬಗ್ಗೆ ಇನ್ನು ಸಿಕ್ಕಿಲ್ಲ. ಅವರ ವೈಯಕ್ತಿಕ ವೈಮನಸ್ಸಿಗಾಗಿ ಈ ಕೊಲೆ ನಡೆದಿರುಬಹುದು ಎಂದು ಹೇಳಲಾಗಿದೆ. ಇದೀಗ ಗಂಗೊಳ್ಳಿ ಠಾಣಾ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಕೊಲೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.