ಮಂಗಳೂರು: ಕಿನ್ನಿಗೋಳಿಯಲ್ಲಿ ಎರಡು ತಲೆಯ ಅಪರೂಪದ ಕರುವೊಂದು ಜನನ
ಮಂಗಳೂರು: ಕಿನ್ನಿಗೋಳಿಯಲ್ಲಿ ಎರಡು ತಲೆಯ ಅಪರೂಪದ ಕರುವೊಂದು ಜನನವಾಗಿದೆ. ಕರು ಸ್ಥಳೀಯರು ಮತ್ತು ಪಶುವೈದ್ಯರ ಗಮನ ಸೆಳೆದಿದೆ. ಇದು ಆರೋಗ್ಯಕರವಾಗಿದ್ದರೂ, ಅದರ ದೀರ್ಘಕಾಲೀನ ಉಳಿವು ಅನುಮಾನ ಎಂದು ಹೇಳಲಾಗಿದೆ. ದಾಮಸ್ಕಟ್ಟೆ ದೂಜಲಗುರಿ ನಿವಾಸಿ ಜಯರಾಮ ಜೋಗಿ ಎಂಬುವವರ ಹಸು ಒಂದು ದೇಹವಿದ್ದರೂ ಎರಡು ತಲೆ ಹೊಂದಿರುವ ವಿಶಿಷ್ಟ ಕರುವಿಗೆ ಜನ್ಮ ನೀಡಿದೆ. ಎರಡೂ ತಲೆಗಳು ಸೇರಿಕೊಂಡಿವೆ ಮತ್ತು ಪ್ರತಿಯೊಂದಕ್ಕೂ ಎರಡು ಕಣ್ಣುಗಳಿವೆ, ಆದರೆ ಎರಡು ಮಧ್ಯದ ಕಣ್ಣುಗಳು ಕಾಣಿಸುವುದಿಲ್ಲ, ಆದರೆ ಇನ್ನು ಉಳಿದ ಎರಡು ಕಾಣುಗಳು ಕಾರ್ಯನಿರ್ವಹಿಸುತ್ತವೆ. ಕರು ನಿಲ್ಲಲು ಸಾಧ್ಯವಾಗುತ್ತಿಲ್ಲ, ಅದಕ್ಕೆ ಬಾಟಲಿಯಲ್ಲಿ ಹಾಲು ನೀಡಲಾಗುತ್ತದೆ.
ಇದೇ ಹಸುವಿಗೆ ಜನಿಸಿದ ಎರಡನೇ ಕರು ಇದಾಗಿದೆ. ಕರು ಹೆಣ್ಣು, ಆದರೆ ಅದರ ಬದುಕುಳಿಯುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗಿದೆ. ಅದಕ್ಕೆ ಎಲ್ಲ ರೀತಿ ಹಾರೈಕೆಯನ್ನು ಮನೆಯವರು ಮಾಡುತ್ತಿದ್ದಾರೆ. ತಲೆಗಳ ತೂಕವು ಅದರ ದೇಹದ ಶಕ್ತಿಯನ್ನು ಮೀರಿದೆ. ಆ ಕಾರಣದಿಂದ ಅದಕ್ಕೆ ಮೇಲೆ ಎಂದು ನಿಲ್ಲು ಆಗುತ್ತಿಲ್ಲ ಎಂದು ಹೇಳಲಾಗಿದೆ.
ಪಶುವೈದ್ಯರು ಈ ಸ್ಥಿತಿಯನ್ನು ಪಾಲಿಸೆಫಾಲಿ ಎಂದು ಹೇಳಿದ್ದಾರೆ. ಪಶುವೈದ್ಯರು ಈ ಸ್ಥಿತಿಯನ್ನು ಪಾಲಿಸೆಫಾಲಿ ಎಂದು ಹೇಳಲಾಗಿದೆ. ನಿಲ್ಲಲು ಅಥವಾ ಚಲಿಸಲು ಸಾಧ್ಯವಿಲ್ಲ. ಕರುವಿನ ಬದುಕುಳಿಯುವಿಕೆಯು ತನ್ನಷ್ಟಕ್ಕೆ ತಾನೇ ನಿಂತು ಹಾಲು ಕುಡಿಯುವ ಸಾಮರ್ಥ್ಯದ ಮೇಲೆ ಅವಲಂಬಿತವಾಗಿದೆ ಎಂದು ಮುಲ್ಕಿ ತಾಲೂಕಿನ ಪಶುವೈದ್ಯಕೀಯ ಇಲಾಖೆ ವೈದ್ಯರು ತಿಳಿಸಿದ್ದಾರೆ