Published On: Sun, Sep 8th, 2024

ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸಂಗೀತ ಶರ್ಮಾರಿಗೆ ರಾಜ್ಯಮಟ್ಟದ  “ಶಿಕ್ಷಕರತ್ನಪ್ರಶಸ್ತಿ” ಪ್ರದಾನ

ಬಂಟ್ವಾಳ :  ತಾಲೂಕಿನ ವೀರಕಂಬ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಸಂಗೀತ ಶರ್ಮಾ ಅವರಿಗೆ ರಾಜ್ಯಮಟ್ಟದ  “ಶಿಕ್ಷಕರತ್ನಪ್ರಶಸ್ತಿ” ಯನ್ನು ರವಿವಾರ ರಾಯಚೂರು ನಗರದ ರಂಗಮಂದಿರದಲ್ಲಿ ಕಲಾ ಸಂಕುಲ ಸಂಸ್ಥೆ ವತಿಯಿಂದ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ
ಪ್ರದಾನಗೈದು ಗೌರವಿಸಲಾಯಿತು.


ಅದೇರೀತಿ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಫೀಸ ಹಾಗೂ ಮೆಲ್ಕಾರ್ ಚಂದ್ರಿಕಾ ತರಕಾರಿ ಅಂಗಡಿಯ ಮಾಲಕರಾದ ಮಹಮದ್ ಶರೀಫ್ ಅವರಿಗೆ “ಸಮಾಜ ಸೇವಾ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ರಾಜ್ಯ ಸಣ್ಣ ನೀರಾವರಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವರಾದ ಎನ್ ಎಸ್ ಬೋಸ್ ರಾಜ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,ಪ್ರಶಸ್ತಿ ಪ್ರದಾನಗೈದರು.


ಅತಿಥಿಯಾಗಿ ಭಾಗವಹಿಸಿದ್ದ ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬ ಮಾತನಾಡಿ,
ಸರಕಾರಿ ಶಾಲೆಗಳನ್ನು ಕಡೆಗಣಿಸದೆಶಾಲೆಯ  ಉಳಿವಿಗೆ ಎಲ್ಲರೂ ಪಣತೊಡಬೇಕಲ್ಲದೆ ಊರಿನ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು, ನಾನು ಅವಿದ್ಯಾವಂತನಾದರೂ ನನ್ನ ಊರಿನ ಮಕ್ಕಳು ವಿದ್ಯಾವಂತರಾಗಬೇಕೆಂಬ ದೃಷ್ಟಿಯಿಂದ ಶಾಲೆಯನ್ನು ತೆರೆಯಲು ಕಾರಣವಾಯಿತು,  ನನ್ನ ಕಾರ್ಯವನ್ನು ಗುರುತಿಸಿ ಆಭಿನಂದಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.


ಇದೇವೇಳೆ ಶಿಕ್ಷಣ ಪ್ರೇಮಿ ಸೇವಾ ಕಾಲೇಜಿನ ಡಾಕ್ಟರ್ ಶರಣಬಸವ ಪಾಟೀಲ್ ಜೋಳದಡಗಿ,
ಕಿರುತೆರೆ ನಟಿ ರಜಿನಿ ಬೆಂಗಳೂರು, ಕಲಾವಿದೆ ಭಾರತಿ ಗೋಪಾಲ್ ಹೆಬ್ರಿ ಇವರನ್ನು ಸನ್ಮಾನಿಸಲಾಯಿತು,
ವೈದ್ಯ ರತ್ನ ಪ್ರಶಸ್ತಿ ಪಡೆದಿರುವ ಡಾ. ಏನ್ ವಿಜಯಶಂಕರ ಅವರನ್ನು ಅಭಿನಂದಿಸಲಾಯಿತು.


ಕೇರಳದ ಲಿಬೀನ್ ಕೃಷ್ಣ,ಕಲಾವಿದರಾದ ಅಮರಗೌಡ, ಮಹಾಲಕ್ಷ್ಮಿ ,ಚಿರಂಜೀವಿ ಯಾದವ್ ಸಯ್ಯದ್ ಅಲಿ, ಮೌನೇಶ ಮಹೇಶ ಗೋವಿಂದ ವಡವಾಟಿ ಮೊದಲಾದವರುಉಪಸ್ಥಿತರಿದ್ದರು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾ ಸಂಕಲ ಸಂಸ್ಥೆಯ ಅಧ್ಯಕ್ಷೆ ರೇಖಾ ಬಡಿಗೇರ್ ವಹಿಸಿದ್ದರು.ಅತಿಥಿಗಳು ಸರ್ವಪಳ್ಳಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು,

ಕಾರ್ಯಕ್ರಮದ ಮೊದಲಿಗೆ  ರಾಯಚೂರಿನಲ್ಲಿ ಅಪಘಾತಕ್ಕೆ ಬಲಿಯಾದ ಶಾಲಾ ಮಕ್ಕಳಿಗೆ  ಮೌನ ಪ್ರಾರ್ಥನೆಯ ಮೂಲಕ ಶೃದ್ದಾಂಜಲಿ‌ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ  ಪ್ರತಿ ಜಿಲ್ಲೆಯಿಂದ ಆಯ್ಕೆ ಮಾಡಲಾದ ಶಿಕ್ಷಕರಿಗೆ ಹಾಗೂ ಸಮಾಜಸೇವಕರನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯದರ್ಶಿ ಮಾರುತಿ ಬಡಿಗೇರ್ ಸ್ವಾಗತಿಸಿದರು. ಡಾ. ವಿಜಯ ಕಾರ್ಯಕ್ರಮ ನಿರೂಪಿಸಿದರು.  

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter