ಹಬ್ಬ ಆಚರಣೆಗಳು ನಮ್ಮ ಮೂಲ ಸಂಸ್ಕೃತಿ ಉಳಿಸುವ ದೃಷ್ಟಿಕೋನದಲ್ಲಾಗಬೇಕು: ರೇಣುಕಾ ಕಣಿಯೂರು
ಬಂಟ್ವಾಳ: ಹಬ್ಬ ಆಚರಣೆಗಳು ನಮ್ಮ ಮೂಲ ಸಂಸ್ಕೃತಿ ಉಳಿಸುವ ದೃಷ್ಟಿಕೋನದಲ್ಲಿ ಆಗಬೇಕು. ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿ ಹಬ್ಬ ಆಚರಣೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ನಮ್ಮಆಚಾರ,ಸಂಸ್ಕಾರ,ಸಂಸ್ಕೃತಿಯನ್ನು ತಿಳಿವಂತೆ ಮಾಡಬೇಕು ಎಂದು ಶಿಕ್ಷಕಿ, ಸಂಪನ್ಮೂಲ ವ್ಯಕ್ತಿ ರೇಣುಕಾ ಕಣಿಯೂರ್ ಹೇಳಿದರು.

ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಕೆಲಿಂಜ ಗಣೇಶೋತ್ಸವ ವತಿಯಿಂದ ನಡೆದ 48ನೇ ವರ್ಷದ ಗಣೇಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸಂದೀಪ್ ಪೂಜಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತಲ್ಲದೆ ವಿವಿಧ ಕ್ರೀಡಾಕೂಟಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಉದ್ಯಮಿ ಪ್ರೀತಿಶ್ ತೊಕ್ಕೊಟ್ಟು, ಕಾರ್ತಿಕ್ ಭಂಡಾರಿ ಬೆಂಗಳೂರು,ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ರಾಜೇಂದ್ರ ಟೈಲರ್ ನಗ್ರಿಮೊಲೆ. ಮಾಜಿ ಅಧ್ಯಕ್ಷ ದೇವದಾಸ ರೈ ಮಾಡದಾರು, ಮೊದಲಾದವರು ಉಪಸ್ಥಿತರಿದ್ದರು.
ಜಗದೀಶ್ ರೈ ನಡುವಳಚ್ಚಿಲ್ ಸ್ವಾಗತಿಸಿ, ಶ್ರೀಧರ ಗೌಡ ನಡುವಳಚ್ಚಿಲ್ ವಂದಿಸಿ, ತೀರ್ಥೇಶ್ ಮಾಡದಾರು ಕಾರ್ಯಕ್ರಮ ನಿರೂಪಿಸಿದರು.