ಬಂಟ್ಚಾಳ: ಸಮಾಜ ಸೇವಾ ಸಹಕಾರಿ ಸಂಘದ ವ ಮಹಾಸಭೆ ಶೇ .೧೭ ಡಿವಿಡೆಂಡ್ ಘೋಷಣೆ
ಬಂಟ್ವಾಳ:ಸಮಾಜ ಸೇವಾ ಸಹಕಾರಿ ಸಂಘ ಬಂಟ್ವಾಳ ಇದರ ವಾರ್ಷಿಕ ಮಹಾಸಭೆಯು ಬಿ.ಸಿ.ರೋಡಿನ “ಸ್ಪರ್ಶಾ ಕಲಾ ಮಂದಿರ”, ಇದರ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸುರೇಶ ಕುಲಾಲ್‌ರವರು ೨೦೨೩-೨೪ನೇ ಸಾಲಿನಲ್ಲಿ ಸದಸ್ಯರಿಗೆ ಶೇ .೧೭ ಡಿವಿಡೆಂಡ್ ನನ್ನು ಪ್ರಕಟಿಸಿದರು.

ಸಂಘದಲ್ಲಿ ೮೬೬೦ ಸದಸ್ಯರಿದ್ದು,ಪಾಲು ಬಂಡವಾಳ ೭.೮೭ ಕೋ.ರೂ.,೨೧೪.೨೬ ಕೋ.ರೂ. ಠೇವಣಾತಿಗಳು, ೧೫.೬೮ ಕೋ.ರೂ.ನಿಧಿಗಳು,೫೯.೮೨ ಕೋ.ರೂ.ವಿನಿಯೋಗಗಳು, ೧೯೨.೭೮ ಕೋ.ರೂ.ಸಾಲಗಳು ಹೊರಬಾಕಿ ಇದ್ದು,೯೫.೦೨ ಶೇ.ವಸೂಲಾತಿ ಮಾಡಲಾಗಿದೆ ಎಂದು ವಿವರಿಸಿದರು.
೨೦೨೩-೨೪ನೇ ಸಾಲಿನಲ್ಲಿ ೯೮೨.೫೪ ಕೋ.ರೂ. ವ್ಯವಹಾರ ನಡೆಸಿ, ೫.೭೧ ಕೋಟಿ ಲಾಭ ಗಳಿಸಿರುತ್ತದೆ. ಸಂಘದ ದುಡಿಯುವ ಬಂಡವಾಳ ೨೩೯.೯೦ ಕೋ.ರೂ. ಆಗಿದ್ದು, ಅಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಪಡೆದಿದೆ.ಮುಂದಿ ದಿನಗಳಲ್ಲಿ ಸದಸ್ಯರ ಸಹಕಾರ, ಆಡಳಿತ ಮಂಡಳಿಯ ಯೋಚನೆ ಮತ್ತು ಯೋಜನೆಯನ್ನು ಸಭೆಯ ಮುಂದಿಟ್ಟ ಅಧ್ಯಕ್ಷ ಸುರೇಶ್ ಕುಲಾಲ್ ಸದಸ್ಯರ ಸದಸ್ಯರ ಸಹಕಾರವನ್ನು ಕೋರಿದರು.
ಸಂಘದ ಉಪಾಧ್ಯಕರಾದ ಪದ್ಮನಾಭ ವಿ. ಆಡಳಿತ ಮಂಡಳಿ ಸದಸ್ಯರಾದ ವಿಶ್ವನಾಥ ಕೆ. ಬಿ., ಅರುಣ್ ಕುಮಾರ್, ಜನಾರ್ಧನ ಕುಲಾಲ್ ಬೊಂಡಾಲ, ಸತೀಶ, ಸುರೇಶ್ ಎನ್., ರಮೇಶ್ ಸಾಲ್ಯಾನ್, ನಾಗೇಶ್ ಬಿ., ವಿ. ವಿಜಯ್ ಕುಮಾರ್, ಎಮ್. ಕೆ ಗಣೇಶ್ ಸಮಗಾರ, ಜಗನ್ನಿವಾಸ ಗೌಡ, ಜಯಂತಿ, ವಿದ್ಯಾ, ವಿಜಯಲಕ್ಷ್ಮೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ನಿರ್ದೇಶಕರಾದ ಬಿ. ರಮೇಶ್ ಸಾಲ್ಯಾನ್ ಸ್ವಾಗತಿಸಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಮೋಹನ್ ಎಮ್. ಕೆ. ರವರು ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ವ್ಯವಸ್ಥಾಪಕರಾದ ಭೋಜ ಮೂಲ್ಯರವರು ಲೆಕ್ಕ ಪತ್ರಗಳನ್ನು ಮಂಡಿಸಿದರು. ವ್ಯವಸ್ಥಾಪಕರಾದ ಶ್ರೀ ವಿನೋದ್ ಕುಮಾರ್ ಸಹಕರಿಸಿದರು. .