ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ
ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಅಶ್ರಯದಲ್ಲಿ 45 ನೇ ವರ್ಷದ ಸಾರ್ವ ಜನಿಕ ಶ್ರೀಗಣೇಶೋತ್ಸವವು ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವೀ ದೇವಸ್ಥಾನದ ಸನ್ನಿಧಿಯ ವಠಾರದ ಸಭಾಮಂಟಪದಲ್ಲಿ ಸೆ.7 ರಿಂದ 10 ರವರೆಗೆ ವಿವಿಧ ವೈಧಿಕ ವಿಧಿವಿಧಾನ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ. 7 ರಂದು ಬೆಳಿಗ್ಗೆ ಧ್ವಜಾರೋಹಣದ ಬಳಿಕ ಶ್ರೀಗಣೇಶನ ಪ್ರತಿಷ್ಠಾ ಗಣಹೋಮ, ಭಜನೆ,ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭರತನೃತ್ಯ ಸಿಂಚನ ,ರಾತ್ರಿ ಮಹಾಪೂಜೆ, ಸೆ. 8 ಬೆಳಿಗ್ಗೆ ಗಣಹೋಮ ಮಧ್ಯಾಹ್ನ ಮಂಗಳಾರತಿ, ಸಂಜೆ ಭಜನೆ, ಯಕ್ಷಗಾನ ಬಯಲಾಟ,ಮಹಾಪೂಜೆ ನಡೆಯಲಿದೆ.
ಸೆ.9 ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಂಗಳಾರತಿ,ಸಂಜೆ ಭಜನೆ,ಭಕ್ತಿ ಪ್ರಧಾನ ತುಳು ನಾಟಕ,ಮಹಾಪೂಜೆ ಸೆ. 10 ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಂಗಳಾರತಿ ಬಳಿಕ ಅನ್ನ ಸಂತರ್ಪಣೆ, ಬಿ.ಸಿ.ರೋಡು ಚಿಲಿಪಿಲಿ ಬಳಗದಿಂದ ಗೊಂಬೆ ಕುಣಿತ, ಮಹಾಪೂಜೆ,ವಿಸರ್ಜನಾ ಪೂಜೆಯ ಬಳಿಕ ಶ್ರೀಗಣೇಶನ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಫರಂಗಿಪೇಟೆ
ಫರಂಗಿಪೇಟೆ ಹಿಂದೂ ಧಾರ್ಮಿಕ ಸೇವಾ ಸಮಿತಿ ವತಿಯಿಂದ 42 ನೇ ವರ್ಷದ “ಫರಂಗಿಪೇಟೆ ಗಣೇಶೋತ್ಸವ”ವು ಸೆ. 7 ರಿಂದ 9 ರ ವರೆಗೆ ಮೂರು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ. 7 ರಂದು ಬೆಳಿಗ್ಗೆ 7.20 ಕ್ಕೆ ಶ್ರೀ ಮಹಾಗಣಪತಿಯ ಪ್ರತಿಷ್ಠೆ,ಧ್ವಜಾರೋಹಣ,ಹೋಸ್ತಾರೋಪಣೆ,108 ತೆಂಗಿನಕಾಯಿಯ ಗಣಯಾಗ, ಭಜನೆ,ಮಹಾಪೂಜೆ,ಮಧ್ಯಾಹ್ನ ತಾಳಮದ್ದಳೆ,ಸಂಜೆ ನಾಟಕ,ರಾತ್ರಿ ರಂಗಪೂಜೆ,ವಿವಿಧ ಭಜನಾ ಮಂಡಳಿಯಿಂದ ಭಜನೆ
ಸೆ.8 ಬೆಳಿಗ್ಗೆ108 ತೆಂಗಿನಕಾಯಿಯ ಗಣಯಾಗ,ಭಜನೆ,ರಂಗೋಲಿ ಸ್ಪರ್ಧೆ,ಗಣಪತಿಚಿತ್ರ ಬಿಡಿಸುವ ಸ್ಪರ್ಧೆ,ಮಹಾಪೂಜೆ,ಯಕ್ಷ- ಹಾಸ್ಯ-ವೈಭವ,ಸಂಜೆ ಸಭಾಕಾರ್ಯಕ್ರಮ,ಬಳಿಕ ಭಕ್ತಿಸಂಗೀತ ರಸಮಂಜರಿ,ರಾತ್ರಿ ಪೂಜೆ,ಯಕ್ಷಗಾನ ಬಯಲಾಟ ನಡೆಯಲಿದೆ.
ಸೆ. 9ಕ್ಕೆ ಬೆಳಿಗ್ಗೆ 108 ತೆಂಗಿನಕಾಯಿಯ ಗಣಯಾಗ,ಭಜನೆ,ಮಹಾಪೂಜೆ,ಸಂಜೆ ಸಮಾರೋಪ ಸಮಾರಂಭ,ವಿಸರ್ಜನಾ ಪೂಜೆ ಬಳಿಕ ಶ್ರೀ ಮಹಾಗಣಪತಿಯ ಹೆದ್ದಾರಿಯಲ್ಲಿ ಭವ್ಯವಾದ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬರಿಮಾರು:
ಶ್ರೀ ಮಹಮ್ಮಾಯಿ ಸೇವಾ ಸಮಿತಿ(ರಿ) ಬರಿಮಾರು,ಶ್ರೀದೇವಿ ಸೇವಾ ಟ್ರಸ್ಟ್ (ರಿ) ಬರಿಮಾರು ಇದರ ಆಶ್ರಯದಲ್ಲಿ 39 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಸೆ. 7 ಮತ್ತು 8 ರಂದು ಎರಡು ದಿನಗಳ ಕಾಲ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ, ಶ್ರೀಗಣೇಶ ವಿಗ್ರಹದ ಪ್ರತಿಷ್ಠಾಪನೆ,ಭಜನೆ,ಮಹಾಪೂಜೆ, ಅನ್ನಸಂತರ್ಪಣೆ,ಸಂಜೆ ಭಜನೆ, ಪೂಜೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ,ರಾತ್ರಿ ಯಕ್ಷಗಾನ ಬಯಲಾಟ ಜರಗಲಿದೆ.
ಸೆ. 8 ರಂದು ಬೆಳಿಗ್ಗೆ ಪೂಜೆ,ಭಜನೆ,ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ,ಸಾಂಸದಕೃತಿಕ ಕಾರ್ಯಕ್ರಮ, ಸಭಾಕಾರ್ಯಕ್ರಮ,ಸಂಜೆ ವಿಸರ್ಜನಾ ಪೂಜೆ ಬಳಿಕ ಶ್ರೀಗಣೇಶನ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಾಮದಪದವು:
ಬಂಟ್ವಾಳ ತಾಲೂಕಿನ ವಾಮದಪದವುಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 41ನೇ ವರ್ಷದ
“ಶ್ರೀ ಗೌರಿ ಗಣೇಶೋತ್ಸವದ ಗಣೇಶೋತ್ಸವವು”ವಾಮದಪದವಿನ “ಶ್ರೀ ಗಣೇಶ ಮಂದಿರ”ದಲ್ಲಿ ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.6 ರಿಂದ 8 ರವರೆಗೆ ಜರಗಲಿದೆ. ಸೆ.6 ರಂದು ಬೆಳಿಗ್ಗೆ 08-30 ಧ್ವಜಾರೋಹಣ,ಬಳಿಕ ಶ್ರೀಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪನೆ,ಗೌರಿ ಪೂಜೆ, ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ,ಸಂಜೆ ಭಜನೆ, ಮಹಾಪೂಜೆ,ಯಕ್ಷಗಾನ ಬಯಲಾಟ ನಡೆಯಲಿದೆ.
ಸೆ. 7 ರಂದು ಪ್ರಾತ: ಪೂಜೆಯ ಬಳಿಕ 108 ತೆಂಗಿನಕಾಯಿಯ ಗಣಹೋಮ,ಧಾರ್ಮಿಕಸಭೆ,ಮಧ್ಯಾಹ್ನ ಮಹಾಪೂಜೆ,
ಸಾರ್ವಜನಿಕ ಅನ್ನಸಂತರ್ಪಣೆ,ಸಂಜೆ ಭಜನೆ,ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ರಾಯಿ:
ಸಾರ್ವಜನಿಕ ಶ್ರೀಗಣೇಶೋತ್ಸವ ಆಚರಣಾ ಸಮಿತಿ ರಾಯಿ ವಲಯ ಬಂಟ್ವಾಳ ತಾಲೂಕು ಇದರ ವತಿಯಿಂದ 13 ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸೆ.7 ಮತ್ತು 8 ರಂದು ರಾಯಿ ಪೇಟೆಯಲ್ಲಿ ನಡೆಯಲಿದೆ.
ಬೆಳಿಗ್ಗೆ 9.30 ಕ್ಕೆ ಕಾರ್ಯಕ್ರಮದ ಉದ್ಘಾಟನೆ ಬಳಿಕ ಶ್ರೀಗಣೇಶ ವಿಗ್ರಹದ ಪ್ರತಿಷ್ಠೆ,ಗಣಹೋಮ,ಭಜನೆ,ಮಹಾಪೂಜೆ,ಪ್ರಸಾದ ವಿತರಣೆ,ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಭಕ್ತಿ ರಸಮಂಜರಿ,ಮಹಾಪೂಜೆ,ಪ್ರಸಾದ ವಿತರಣೆ.
ಸೆ.8 ರಂದು ಪ್ರಾತ; ಕಾಲಪೂಜೆ,10ಗಂಟೆಗೆ ಯಕ್ಷ ಹಾಸ್ಯ ವೈಭವ ಬಳಿಕ ಧಾರ್ಮಿಕಸಭೆ, ಮಹಾಪೂಜೆ,ಅನ್ನ ಸಂತರ್ಪಣೆ,”ನೃತ್ಯ ರಂಜನಿ” ಸಂಜೆ ವಿಸರ್ಜನಾಪೂಜೆ,ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.