“ಅಮೃತ ದೇವಿ ಪ್ರಕೃತಿ ವಂದನ ೨೦೨೪”
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಅಮೃತ ದೇವಿ ಪ್ರಕೃತಿ ವಂದನ ೨೦೨೪” ಕಾರ್ಯಕ್ರಮ ನಡೆಯಿತು.ಶ್ರೀರಾಮ ಪ್ರಾಥಮಿಕ ವಿಭಾಗದ ಅಧ್ಯಾಪಕ ಬಾಲಕೃಷ್ಣ ಅವರು ಮಾತನಾಡಿ,“೩೭೦ ವರ್ಷಗಳ ಹಿಂದೆ ರಾಜಸ್ಥಾನದ ಜೋಧ್‌ಪುರದ ರಾಜ ಅಭಯಸಿಂಹನ ಸೈನಿಕರು ವೃಕ್ಷ ಕತ್ತರಿಸಲು ಮುಂದಾದಾಗ ಸೈನಿಕರನ್ನು ಎದುರಿಸಿ ಮರಗಳನ್ನು ಅಪ್ಪಿಕೊಂಡು ಸೈನಿಕರಿಂದ ತಲೆ ಕತ್ತರಿಸಲ್ಪಟ್ಟವರು ಖೇಜವಾಡಿ ಗ್ರಾಮದ ಅಮೃತದೇವಿ ಎಂಬ ವೃಕ್ಷ ಪ್ರೇಮಿ ಕುಟುಂಬ ವಾಗಿದೆ ಎಂದರು.

ಅವರೊಂದಿಗೆ ಮರವನ್ನು ಅಪ್ಪಿಕೊಂಡ ನಿಂತ ಅದೇ ಗ್ರಾಮದ ೩೬೩ ನರ-ನಾರಿಯರನ್ನು ಕೂಡ ನಿರ್ದಾಕ್ಷಿಣವಾಗಿ ಸೈನಿಕರು ಹತ್ಯೆ ಮಾಡುತ್ತಾರೆ. ಈ ವಿಷಯ ತಿಳಿದು ದಿಗಿಲಾದ ಸೈನಿಕ ಊರಿನವರ ಬಳಿ ಕ್ಷಮಾಪಣೆ ಕೇಳಿ, ಅಮೃತದೇವಿಯ ಸ್ಮಾರಕ ಮಾಡುತ್ತಾನೆ. ಅಮೃತ ದೇವಿ ತನ್ನ ಪರಿವಾರ ಸಮೇತ ಪರಿಸರ ಸಂರಕ್ಷಣೆಗಾಗಿ ಬಲಿಯಾದಳು. ಆದರೆ ಪ್ರಸ್ತುತ ಅಮೃತ ದೇವಿಯ ಅಮರ ಬಲಿದಾನ ಅಜ್ಞಾತವಾಗಿಯೆ ಉಳಿದಿದೆ ಎಂದ ಅವರು. ಈ ಅಮರ ಬಲಿದಾನದ ಪ್ರಯುಕ್ತ ಪ್ರತಿಯೊಬ್ಬರು ಕನಿಷ್ಟ ಒಂದಾದರೂ ಗಿಡ ನೆಡುವ ಸಂಕಲ್ಪ ಮಾಡಬೇಕೆಂದರು.
ಇದೇ ವೇಳೆ ಶಾಲೆಯಲ್ಲಿರುವ ಹಲಸಿನ ವೃಕ್ಷವನ್ನು ಅಲಂಕರಿಸಿ ಪೂಜಿಸಲಾಯಿತು. ಒಂದನೇ ತರಗತಿಯ ವಿದ್ಯಾರ್ಥಿಗಳು ಆರತಿ ಬೆಳಗಿದರು. ಅಧ್ಯಾಪಕ ವೃಂದದವರು ಹಾಗೂ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು.
ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳು ಶಾಲಾ ಬಳಿ ಗಿಡಗಳನ್ನು ನೆಟ್ಟರು. ವಿಜ್ಞಾನ ಸಂಘದವರು ಕಾರ್ಯಕ್ರಮ ನಿರ್ವಹಿಸಿತು.