ಬಂಟ್ವಾಳ ಬಂಟರ ಮಹಿಳಾ ವಿಭಾಗದ ವತಿಯಿಂದ “ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಸಾಧಕಿಯರಿಗೆ ಸನ್ಮಾನ
ಬಂಟ್ವಾಳ : ಬಂಟವಾಳ ತಾಲೂಕು ಬಂಟರ ಸಂಘ ದ ಆಶ್ರಯದಲ್ಲಿ ಮಹಿಳಾ ವಿಭಾಗದ ವತಿಯಿಂದ “ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆಗೈದ ಆರು ಮಂದಿ ಸಾಧಕಿಯರಿಗೆ ಸನ್ಮಾನ ಸಮಾರಂಭವು ಬ್ರಹ್ಮರಕೊಟ್ಲುವಿನಲ್ಲಿರುವ ಬಂಟವಾಳ ಬಂಟರಭವನದಲ್ಲಿ ನಡೆಯಿತು.

ರೇಖಾ ಜೆ ಶೆಟ್ಟಿ ( ಸರಕಾರಿ ಸೇವೆ),ದಿವ್ಯಾ ವಸಂತ ಶೆಟ್ಟಿ , (ಶಿಕ್ಷಣ ಸಂಶೋಧನೆ), ಸುಶೀಲ ದಿನೇಶ್ ಶೆಟ್ಟಿ (ನಾಟಿ ವೈದ್ಯೆ),ಪ್ರೇಮಲತಾ ಜಯರಾಮ್ ರೈ(ಶಿಕ್ಷಣ ಕ್ಷೇತ್ರ),ಮಲ್ಲಿಕಾ ಹೆಗ್ಡೆ(ಕ್ರೀಡಾ ಕ್ಷೇತ್ರ) , ಅಕ್ಷತಾ ದಿನೇಶ್ ಶೆಟ್ಟಿ
(ಪರಿಸರ ನೈರ್ಮಲ್ಯ) ಯವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಚಂದ್ರಹಾಸ್ ಡಿ ಶೆಟ್ಟಿ,ಪ್ರದಾನ ಕಾರ್ಯದರ್ಶಿ ಜಗನ್ನಾಥ ಚೌಟ ಮಾಣಿ , ಜತೆ ಕಾರ್ಯದರ್ಶಿ ರಂಜನ್ ಶೆಟ್ಟಿ ಅರಳ , ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಯುವ ವಿಭಾಗದ ಅಧ್ಯಕ್ಷರಾದ ನಿಶಾನ್ ಆಳ್ವ , ಮಹಿಳಾ ವಿಭಾಗದ ಅಧ್ಯಕ್ಷೆ ರಮಾ ಎಸ್. ಭಂಡಾರಿ , ಉಪಾಧ್ಯಕ್ಷೆ ಸಂದ್ಯಾ ಡಿ ರೈ , ಕಾರ್ಯದರ್ಶಿ ಸುಮಾ ಎನ್ ಶೆಟ್ಟಿ , ಜತೆ ಕಾರ್ಯದರ್ಶಿ ಮಂದಾರತಿ ಶೆಟ್ಟಿ , ಕೋಶಾಧಿಕಾರಿ ಸುಜಾತಾ ಪಿ ರೈ , ಜತೆ ಕೋಶಾಧಿಕಾರಿ ಮೋಹಿನಿ ರೈ, ಧಾರ್ಮಿಕ ಸಂಚಾಲಕರು ರಷ್ಮಾ ಎ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.