ಬಂಟ್ವಾಳ : 16 ಬೋರ್‌ವೆಲ್ ಪಂಪುಗಳ ಕಳ್ಳತನ ಪ್ರಕರಣ: ಆರೋಪಿಗಳನ್ನು ಬಂಧಿಸಿದ ಪೊಲೀಸರು
ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಗುರ್ಮೆ ಎಂಬಲ್ಲಿ ಸರಿಸುಮಾರು 1 ಲಕ್ಷ 81 ಸಾವಿರ ರೂ ಮೌಲ್ಯದ ಒಟ್ಟು 16 ಬೋರ್‌ವೆಲ್ ಪಂಪುಗಳ ಕಳ್ಳತನ ಮಾಡಿದ್ಧ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹೌದು, ಗಣೇಶ್ ಗೌಡ ಎಂಬವರ ಮನೆಯ ಬಳಿಯ ಕಟ್ಟಡದಲ್ಲಿ ದುರಸ್ತಿಗಾಗಿ ಈ ಬೋರ್ ವೆಲ್ ಗಳನ್ನು ತಂದು ಇರಿಸಲಾಗಿತ್ತು. ಕೊನೆಗೂ ಈ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕಡಬ ತಾಲೂಕಿನ ಪೆರಾಬೆ ಕೊಚ್ಚಕಟ್ಟೆ ನಿವಾಸಿ ಮುಹಮ್ಮದ್ ಶಾಕಿರ್ ಎಂಬಾತನನ್ನು ವಿಶೇಷ ಪೊಲೀಸ್ ತಂಡ ಬುಧವಾರ ಬಂಧಿಸಿದೆ. ಕಾರ್ಯಾಚರಣೆಯ ಸಂದರ್ಭದಲ್ಲಿ, ಪೊಲೀಸರು ಕಳವು ಮಾಡಿದ 16 ಬೋರ್‌ವೆಲ್ ಪಂಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಳ್ಳತನಕ್ಕೆ ಬಳಸಿದ್ದ 2 ಲಕ್ಷ ಮೌಲ್ಯದ ವಾಹನವನ್ನು ಬಳಸಲಾಗಿದೆ. ಈಗಾಗಲೇ ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು 3.81 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: ಪೊಳಲಿಯ ರಿಕ್ಷಾ ಚಾಲಕ ಮಾಲಕರಿಂದ ೭೮ ನೇ ವರ್ಷದ ಸ್ವಾತಂತ್ರ‍್ಯ ದಿನಾಚರಣೆ
ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಬಂಟ್ವಾಳ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಎಸ್.ವಿಜಯ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್ ಹೆಚ್ ಮತ್ತು ಅವರ ತಂಡವು ಆರೋಪಿಗಳನ್ನು ಬಂಧಿಸಿದೆ.