2040ಕ್ಕೆ ಮಂಗಳೂರು, ಉಡುಪಿ ಸಮುದ್ರಪಾಲು, ಅಧ್ಯಯನ ಹೇಳಿದ್ದೇನು?
ದಕ್ಷಿಣ ಕನ್ನಡ ಹಾಗೂ ಉಡುಪಿ ಜನರಿಗೆ ಅಧ್ಯಯನವೊಂದು ಮಹತ್ವದ ಎಚ್ಚರಿಕೆಯನ್ನು ನೀಡಿದೆ. ಹೊಸ ಅಧ್ಯಯನದ ಪ್ರಕಾರ ಮುಂಬೈ, ಪಣಜಿ ಮತ್ತು ಚೆನ್ನೈನಲ್ಲಿ 10 ಪ್ರತಿಶತದಷ್ಟು ಭೂಮಿಯು 2040 ರ ವೇಳೆಗೆ ಮುಳುಗುವ ಅಪಾಯದಲ್ಲಿದೆ ಎಂದು ಹೇಳಿದೆ. ಬೆಂಗಳೂರು ಮೂಲದ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ ಮತ್ತು ಪಾಲಿಸಿ (ಸಿಎಸ್‌ಟಿಇಪಿ) ನಡೆಸಿದ ಅಧ್ಯಯನವು ಈ ಬಗ್ಗೆ ಹೇಳಿದೆ.
ಸಮುದ್ರ ಮಟ್ಟ ಏರಿಕೆಯಿಂದ ಕೊಚ್ಚಿ, ಮಂಗಳೂರು, ವಿಶಾಖಪಟ್ಟಣಂ, ಉಡುಪಿ ಮತ್ತು ಪುರಿಯಲ್ಲಿ ಶೇಕಡಾ 5 ರಷ್ಟು ಭೂಮಿ ಮುಳುಗಬಹುದು ಎಂದು ಹೇಳಿದೆ. ಸಮುದ್ರ ಮಟ್ಟ ಏರಿಕೆ ಕೆಲವೊಂದು ಕರಾವಳಿ ಭಾಗಗಳು ಮುಳುಗಬಹುದು ಎಂದು ಹೇಳಿದೆ. 15 ಭಾರತೀಯ ಕರಾವಳಿ ನಗರಗಳು ಮತ್ತು ಪಟ್ಟಣಗಳ ಹವಾಮಾನಗಳ ಅಡಿಯಲ್ಲಿ ಸಮುದ್ರ ಮಟ್ಟದ ಬದಲಾವಣೆ ಬಗ್ಗೆ ಪರಿಶೀಲನೆ ಮಾಡಲಾಗಿದೆ.
ಚೆನ್ನೈ, ಮುಂಬೈ, ತಿರುವನಂತಪುರಂ, ಕೊಚ್ಚಿ, ಮಂಗಳೂರು, ವಿಶಾಖಪಟ್ಟಣಂ, ಕೋಯಿಕ್ಕೋಡ್ , ಮತ್ತು ಹಲ್ದಿಯಾ, ಕನ್ಯಾಕುಮಾರಿ, ಪಣಜಿ, ಪುರಿ, ಉಡುಪಿ, ಪರದೀಪ್, ತೂತುಕುಡಿ ಮತ್ತು ಯಾನಂ ಭಾಗಗಳು ಮುಳುಗಡೆಯಾಗಬಹುದು. 1987 ರಿಂದ 2021 ರವರೆಗೆ ಮುಂಬೈ ಸಮುದ್ರ ಮಟ್ಟದಲ್ಲಿ ಗರಿಷ್ಠ ಏರಿಕೆಯಾಗಿದೆ. (4.440 cm), ನಂತರ ಹಲ್ದಿಯಾ (2.726 cm), ವಿಶಾಖಪಟ್ಟಣಂ (2.381 cm), ಕೊಚ್ಚಿ (2.213 cm), ಪರದೀಪ್ (0.717 cm), ಮತ್ತು ಚೆನ್ನೈ (0.679 cm) ಏರಿಕೆಯಾಗಿದೆ ಅಧ್ಯಯನವು ಬಹಿರಂಗಪಡಿಸಿದೆ.
ಎಲ್ಲಾ 15 ನಗರಗಳು ಮತ್ತು ಪಟ್ಟಣಗಳಲ್ಲಿ IPCC ಮಾನದಂಡದ ಪ್ರಕಾರ ಈ ಅಧ್ಯಯನವನ್ನು ಮಾಡಲಾಗಿದೆ. ಮುಂಬೈಗೆ ಹೆಚ್ಚಿನ ನೀರಿನ ಮಟ್ಟ ಉಂಟಾಗಬಹುದು ಎಂದು ಹೇಳಿದೆ. 2100 ರ ವೇಳೆಗೆ ಮುಂಬೈನಲ್ಲಿ 76.2 ಸೆಂ.ಮೀ, ಪಣಜಿಯಲ್ಲಿ 75.5 ಸೆಂ.ಮೀ, ಉಡುಪಿಯಲ್ಲಿ 75.3 ಸೆಂ.ಮೀ., ಮಂಗಳೂರಿನಲ್ಲಿ 75.2 ಸೆಂ.ಮೀ., ಕೋಝಿಕೋಡ್ನಲ್ಲಿ 75.1 ಸೆಂ.ಮೀ., ಕೊಚ್ಚಿಯಲ್ಲಿ 74.9 ಸೆಂ.ಮೀ., ತಿರುವನಂತಪುರದಲ್ಲಿ 74.7 ಸೆಂ.ಮೀ, ಮತ್ತು ಕನ್ಯಾಕುಮಾರಿಯಲ್ಲಿ 74.7 ಸೆಂ.ಮೀ. ಹೆಚ್ಚಾಗಬಹುದು ಎಂದು ಹೇಳಲಾಗಿದೆ.
ಮುಂಬೈ, ಯಾನಂ ಮತ್ತು ತೂತುಕುಡಿಯಲ್ಲಿ 10 ಪ್ರತಿಶತಕ್ಕಿಂತ ಹೆಚ್ಚು ಭೂಮಿಯನ್ನು ಆವರಿಸಬಹುದು ಎಂದು ಹೇಳಲಾಗಿದೆ. ಪಣಜಿ ಮತ್ತು ಚೆನ್ನೈನಲ್ಲಿ ಶೇ.5-10; ಮತ್ತು ಕೊಚ್ಚಿ, ಮಂಗಳೂರು, ವಿಶಾಖಪಟ್ಟಣಂ, ಹಲ್ದಿಯಾ, ಉಡುಪಿ, ಪಾರಾದೀಪ್ ಮತ್ತು ಪುರಿಯಲ್ಲಿ 2040 ರ ವೇಳೆಗೆ ಸಮುದ್ರ ಮಟ್ಟ ಹೆಚ್ಚಾಗುವುದರಿಂದ 1-5 ಪ್ರತಿಶತ ಮುಳುಗುತ್ತದೆ. 2100 ರಲ್ಲಿ ಮಂಗಳೂರು, ಹಲ್ದಿಯಾ, ಪಾರಾದೀಪ್, ತೂತುಕುಡಿ ಮತ್ತು ಯಾನಂನಲ್ಲಿ ಹೆಚ್ಚಿನ ಮಟ್ಟದಲ್ಲಿ ನೀರಿನ ಹೊರಸೂಸುವಿಕೆ ಉಂಟಾಗುತ್ತದೆ.