ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಬಂಟ್ಟಾಳ ಪ್ರಖಂಡದಿಂದ ಸೇವಾಕಾರ್ಯ
ಬಂಟ್ವಾಳ:ತಾಲೂಕಿನ ಕುರಿಯಾಳ ಗ್ರಾಮದ ದಲ್ಲಿ ತೀರಾ ಬಡತನ ಮತ್ತು ಅಸಹಾಯಕ ಸ್ಥಿತಿಯಲ್ಲಿರುವ ಪದ್ಮನಾಭ ಪೂಜಾರಿ ಅವರ ಕುಟುಂಬಕ್ಕೆ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಬಂಟ್ಟಾಳ ಪ್ರಖಂಡದ ವತಿಯಿಂದ ಧರ್ಮ ರಕ್ಷಣೆ ಮತ್ತು ಸೇವಾ ಕಾರ್ಯ ನಡೆಯಿತು
.
ತೀರಾ ಸಂಕಷ್ಟದಲ್ಲಿದ್ದು ಮನೆ ಮತ್ತು ಸುತ್ತಲಿನ ಪರಿಸರ ಕೆಟ್ಟ ಸ್ಥಿತಿಯಲ್ಲಿದ್ದ ಪದ್ಮನಾಭ ಪೂಜಾರಿಯವರ ಮನೆಯನ್ನು ಸಂಪೂರ್ಣವಾಗಿ ಶುಚಿಗೊಳಿಸಿದಲ್ಲದೆ ಮನೆಗೆ ಬಣ್ಣ ಬಳಿಯುವ ಕಾರ್ಯವನ್ನು ಬಂಟ್ಟಾಳ ಬಜರಂಗದಳ ಕಾರ್ಯಕರ್ತರು ಮಾಡಿದರು.
ಹಾಗೆಯೇ ಅವರ ಮನೆಗೆ ಒಂದು ತಿಂಗಳಿಗೆ ಬೇಕಾದ ಜಿನಸಿ ಸಾಮಾಗ್ರಿಗಳನ್ನು ಒದಗಿಸಿ ಮುಂದಕ್ಕೆ ಎಲ್ಲಾ ರೀತಿಯ ಮೂಲ ಸೌಕರ್ಯವನ್ನು ಒದಗಿಸುವ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷದ್ ಬಜರಂಗದಳವು ವಹಿಸಿಕೊಂಡಿದೆ.