ಬಂಟ್ವಾಳ: ಮೇ ದಿನಾಚರಣೆ-2024
ಬಂಟ್ವಾಳ: ಎನ್ ಡಿ ಎ ಮೈತ್ರಿಕೂಟ ಮಗದೊಮ್ಮೆ ಅಧಿಕಾರಕ್ಕೆ ಬಂದರೆ ನೂರಾರು ವರ್ಷಗಳ ತ್ಯಾಗ ಬಲಿದಾನಗಳ ಐತಿಹಾಸಿಕ ಹೋರಾಟದಿಂದ ಗಳಿಸಿದಂತಹ ಕಾರ್ಮಿಕ ಕಾಯ್ದೆ ಕಾನೂನುಗಳು ಕೈ ತಪ್ಪಿ ಹೋಗಲಿದೆ ಎಂದು ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಹೇಳಿದ್ದಾರೆ.

ಬಂಟ್ವಾಳ ಬೈಪಾಸ್ ನಲ್ಲಿರುವ ಎ.ಶಾಂತಾರಾಂ ಪೈ ಸ್ಮಾರಕ ಭವನದಲ್ಲಿ ಎಐಟಿಯುಸಿ ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಜರುಗಿದ ಮೇ ದಿನಾಚರಣೆ-2024ರ ಸಭೆಯನ್ನುದ್ಧೇಶಿಸಿ ಅವರು ಮಾತನಾಡುತ್ತಿದ್ದರು.
ಸಭೆಗೆ ಮುನ್ನ ಧ್ವಜಾರೋಹಣ ನಡೆಯಿತು. ಎಐಟಿಯುಸಿ ಬಂಟ್ವಾಳ ತಾಲೂಕಿನ ಹಿರಿಯ ಮುಖಂಡ ಬಿ.ಬಾಬು ಭಂಡಾರಿ ಧ್ವಜಾರೋಹಣ ನೆರವೇರಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಎಐಟಿಯುಸಿ ಜಿಲ್ಲಾ ನಾಯಕಿ ಶಮಿತಾ, ಎಐಟಿಯುಸಿ ಜಿಲ್ಲಾ ಯುವ ನಾಯಕ ಪ್ರೇಮನಾಥ ಕೆ ಉಪಸ್ಥಿತರಿದ್ದರು.
ಎಐವೈಎಫ್ ನ ಬಂಟ್ವಾಳದ ನಾಯಕ ಹರ್ಷಿತ್, ಮೋಹನ್ ಅರಳ, ಸುರೇಶ್ ಕೆ, ಭಾರತೀಯ ಮಹಿಳಾ ಒಕ್ಕೂಟ ದ ವನಜಾಕ್ಷಿ, ಸರೋಜಿನಿ, ಕುಸುಮಾ ವಹಿಸಿದ್ದರು.
ಎಐಟಿಯುಸಿ ಜಿಲ್ಲಾ ಸಹಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.