ಸೇವಾ ಬ್ರಿಗೇಡ್ ಮತ್ತು ಹೆಲ್ಪಿಂಗ್ ಫ್ರೆಂಡ್ಸ್ ಸಹಯೋಗದಲ್ಲಿ ವಿನೂತನ ವಿಶೇಷ ಕಾರ್ಯಕ್ರಮ
ಕೈಕಂಬ: ಸೇವಾ ಬ್ರಿಗೇಡ್ ಮತ್ತು ಹೆಲ್ಪಿಂಗ್ ಫ್ರೆಂಡ್ಸ್ ಸಾಣೂರುಪದವು ಇದರ ಸಹಯೋಗದಲ್ಲಿ ಏ. ೨೪ರಂದು ಬುಧವಾರ ಸಾಣೂರುಪದವು ಮೈದಾನದಲ್ಲಿ ಅಶಕ್ತ ಕುಟುಂಬಗಳ ನೆರವಿಗಾಗಿ ಹಾಗೂ ಕಥೆ ಎಡ್ಡೆಂಡು ನಾಟಕ ಶತದಿನದ ಸಂಭ್ರಮಕ್ಕೆ ನೂತನ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಅದೇ ದಿನ ಸಂಜೆ ೬:೦೦ಗಂಟೆಯಿಂದ ಶ್ರೀ ಪೊಳಲಿ ಡಾನ್ಸ್ ಅಕಾಡೆಮಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ೭:೦೦ಗಂಟೆಯಿAದ ಸಭಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪ್ರಸಾದ್ ನಾಯಕ್ ಸೊಲ್ತಾಡಿ ವಹಿಸಲಿದ್ದು, ದಿವ್ಯ ಉಪಸ್ಥಿತಿಯನ್ನು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮಕ್ಕೆ ಕರಿಯಂಗಳ ಗ್ರಾಂ.ಪಂ. ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಸುಕೇಶ್ ಚೌಟ ಬಡಕಬೈಲ್, ಭುವನೇಶ್ ಪಚ್ಚಿನಡ್ಕ, ಲೋಕೇಶ್ ಪಲ್ಲಿಪಾಡಿ, ಶಿವಪ್ರಸಾದ್ ಮಯ್ಯ, ಸುರೇಶ್ ದೇವಾಡಿಗ ಪೊಳಲಿ, ಚಂದ್ರಹಾಸ ನಾರಳ, ವೆಂಕಟೇಶ್ ನಾವಡ ಪೊಳಲಿ, ಯಶವಂತ್ ಕೋಟ್ಯಾನ್ ಪೊಳಲಿ, ಚಿದಾನಂದ ನಂದ್ಯ, ಸಂತೋಷ್ ಶೆಟ್ಟಿ ಮಂಗಳೂರು, ಲೋಕೇಶ್ ಬಜ್ಪೆ, ದಿನೇಶ್ ಬಟ್ಟಾಜೆ ಆಗಮಿಸಲಿದ್ದಾರೆ.
ರಾತ್ರಿ ೯:೩೦ಕ್ಕೆ ಶಾರದಾ ಆರ್ಟ್ಸ್ ಕಲಾವಿದರು ಮಂಜೇಶ್ವರ ಇವರಿಂದ “ಕಥೆ ಎಡ್ಡೆಂಡು” ತುಳು ನಾಟಕ ನಡೆಯಲಿದೆ.