ಜನಮೆಚ್ಚುಗೆ ಗಳಿಸಿ ಡ್ರಾಮಾ ಜೂನಿಯರ್ಸ್ ಚಾಂಪಿಯನ್ ಟ್ರೋಫಿ ವಿಜೇತೆ ಖ್ಯಾತ ಪತ್ರಕರ್ತ ಜಿತೇಂದ್ರ ಕುಂದೇಶ್ವರರ ಸುಪುತ್ರಿ ರಿಷಿಕಾ ಕುಂದೇಶ್ವರ
ಬೆಂಗಳೂರು: ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಸೀಸನ್ 5 ರ ವಿನ್ನರ್ ಆಗಿ ಮಂಗಳೂರಿನ ರಿಷಿಕಾ ಕುಂದೇಶ್ವರ ಮತ್ತು ವಿಷ್ಣು ಜಂಟಿಯಾಗಿ ಟ್ರೋಫಿ ಗೆದ್ದಿದ್ದಾರೆ.

ರಿಷಿಕಾ ವಿಶ್ವವಾಣಿ ಮಂಗಳೂರು ವರದಿಗಾರ ಜಿತೇಂದ್ರ ಕುಂದೇಶ್ವರ ಮತ್ತು ಸಂಧ್ಯಾ ದಂಪತಿಯ ಪುತ್ರಿ.
ಅಪೂರ್ವ ಭಾವಾಭಿನಯ ಹಾಗೂ ವಾಕ್ಪಟುತ್ವವನ್ನು ಮೈಗೂಡಿಸಿಕೊಂಡಿರುವಂತಹ ಮಂಗಳೂರಿನ ಪ್ರತಿಭೆ ಕು. ರಿಷಿಕಾ ಕುಂದೇಶ್ವರ, ಇವರು ತೀರ್ಪುಗಾರರ ಹಾಗೂ ಜನಮೆಚ್ಚುಗೆ ಗಳಿಸಿ ಸೀಸನ್ 5ರ ಅತಿ ಹೆಚ್ಚು ಆವಾರ್ಡ್ ಗಳನ್ನು ತಮ್ಮದಾಗಿಸಿಕೊಂಡು ಫೈನಲ್ಸ್ ಗೆ ತಲುಪಿದ್ದರು.
ಬಹುಮುಖ ಪ್ರತಿಭೆ ರಿಷಿಕಾ ತಾವು ಮಾಡುತ್ತಿದ್ದ ಪಾತ್ರಗಳಿಗೆ ಜೀವ ತುಂಬುತ್ತಿದ್ದರು ಯಾವುದೇ ಪಾತ್ರವಾದರು ನಟಿಸಲು ಸೈ ಎನಿಸಿಕೊಂಡಿದ್ದಾರೆ.
ಇವರನ್ನು ತೀರ್ಪುಗಾರರಾದ ರವಿಚಂದ್ರನ್, ಲಕ್ಷ್ಮೀ, ರಚಿತರಾಮ್, ರಂಗಮೇಷ್ಟ್ರು ಅರುಣ್ ಸಾಗರ್ ಹಾಗೂ ರಾಜು ತಾಳಿಕೋಟೆ ವಿಶೇಷವಾಗಿ ಮೆಚ್ಚಿಕೊಂಡಿದ್ದರು.