Published On: Sat, Apr 20th, 2024

ಅನಿ ಚಾರಿಟೇಬಲ್ ಫೌಂಡೇಶನ್®️ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

ಮಂಗಳೂರು: ಹಲವಾರು ವಿನೂತನ ಕಾರ್ಯಕ್ರಮಗಳ ಮೂಲಕ ಸೇವಾ ರಂಗದಲ್ಲಿ ಜನ ಮನ್ನಣೆ ಪಡೆದ ಅಬ್ದುಲ್ ಲತೀಫ್ ಗುರುಪುರ ನೇತೃತ್ವದ ಅನಿ ಚಾರಿಟೇಬಲ್ ಫೌಂಡೇಶನ್®️ ವತಿಯಿಂದ ಏಪ್ರಿಲ್ 21 ಆದಿತ್ಯವಾರ ನಾಳೆ ಹತ್ತು ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಉಚ್ಚಿಲ ಸೋಮೇಶ್ವರ ಕಿಯಂಝಾ ಗಾರ್ಡನ್ ನಲ್ಲಿ ನಡೆಯಲಿದೆಯೆಂದು ಸಂಘಟಕರು ಪತ್ರಿಕಾ ಹೇಳಿಕೆಗೆ ತಿಳಿಸಿದ್ದಾರೆ.

ಸಂಜೆ 4 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಹಲವಾರು ಉಲಮಾ, ಉಮರಾ ಶಿರೋಮಣಿಗಳು ಭಾಗವಹಿಸಲಿದ್ದಾರೆ.

5:30ಕ್ಕೆ ನಿಖಾಹ್ ಕಾರ್ಯಕ್ರಮ ಮತ್ತು ಮಗ್ರಿಬ್ ನಮಾಝಿನ ಬಳಿಕ ದಫ್ ಪ್ರದರ್ಶನ ನಡೆಯಲಿದೆಯೆಂದು ಸಂಘಟಕರು ತಿಳಿಸಿದರು.


ಲತೀಫ್ ಗುರುಪುರ ಹಲವಾರು ಕಾರುಣ್ಯ ಸೇವೆ ಮಾಡುತ್ತಿದ್ದು ಇತ್ತೀಚೆಗೆ ಅವರು ಸೂರಿಲ್ಲದವರಿಗೆ ಆಸರೆ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿ ಕೊಡುತ್ತಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter