ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ “ಲಕ್ಷ್ಮಣಾಂತರಂಗ”
ಬಂಟ್ವಾಳ: ದಿವಂಗತ ಪಾದೆಕಲ್ಲು ನಾರಾಯಣ ಭಟ್ಟರ ಜನ್ಮಶತಮಾನೋತ್ಸವ ಪ್ರಯುಕ್ತ ರಾಮಾಯಣದ ಪಾತ್ರಗಳ ಅಂತರಂಗ ನಿರೂಪಣೆಯ ಮೂರನೇ ಸರಣಿ ಕಾರ್ಯಕ್ರಮ “ಲಕ್ಷ್ಮಣಾಂತರಂಗ”ವು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಸಾಧನಾ ಸಭಾಭವನದಲ್ಲಿ ನಡೆಯಿತು.
ದಿವಂಗತ ಪಾದೆಕಲ್ಲು ನಾರಾಯಣ ಭಟ್ಟರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ರೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಕೂಡಾ ಇತರರಿಗೆ ಮಾದರಿಯಾಗಬೇಕು, ಲಕ್ಷ್ಮಣನಂತೆ ಆದರ್ಶ ಸೋದರನಾಗಬೇಕು ಎಂಬುದಾಗಿ ಹೇಳಿದರು.
ಉಡುಪಿಯ ವಿಶ್ರಾಂತ ಪ್ರಾಚಾರ್ಯರಾದ ಡಾ. ಪಾದೆಕಲ್ಲು ವಿಷ್ಣುಭಟ್, ಪ್ರಸ್ತಾವನೆಗೈದರು. ಸರಣಿ ಕಾರ್ಯಕ್ರಮಗಳ ಸಂಚಾಲಕರರಾದ ರಾಮಕುಂಜದ ಗಣರಾಜ ಕುಂಬ್ಳೆ ಅವರು ಪ್ರಸ್ತಾಪಿಸಿದರು. ಪ್ರಸಿದ್ಧ ಯಕ್ಷಗಾನ ಪ್ರಸಂಗ ಕರ್ತರಾದ ಪ್ರೊ. ಪವನ್ ಕಿರಣ್ ಕೆರೆಯವರು ಲಕ್ಷ್ಮಣಾಂತರಂಗ ಸ್ವಾಗತ ಕಥನವನ್ನು ನಡೆಸಿಕೊಟ್ಟರು.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ, ದಕ್ಷಿಣ ಮಧ್ಯ ಕ್ಷೇತ್ರೀಯ ಹೊಯ್ಸಳ ಪ್ರಾಂತ್ಯದ ಕಾರ್ಯಕಾರಿಣಿ ಸದಸ್ಯೆ ಕಮಲಾ ಪ್ರಭಾಕರ ಭಟ್ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕು. ವಿಸ್ಮಿತಾ ಸ್ವಾಗತಿಸಿದರು, ಕು. ಶರಣ್ಯಶ್ರೀ ವಂದಿಸಿದರು, ಕು. ದಿವ್ಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.