ಭೀಕರ ರಸ್ತೆ ಅಪಘಾತ: ಬಸ್ ಗೆ ಲಾರಿ ಡಿಕ್ಕಿ
ಕೈಕಂಬ: ಎಡಪದವಿನಲ್ಲಿ ಏ.19ರಂದು ಶುಕ್ರವಾರ ಬಸ್ ಹಾಗೂ ಲಾರಿಗೆ ಭೀಕರ ಅಪಘಾತ ಸಂಭವಿಸಿತು.

ಬಸ್ ಗೆ ಢಿಕ್ಕಿಯಾದ ರುಚಿಗೋಲ್ಡ್ ಹೇರಿದ್ದ ಲಾರಿಯಿಂದ ರಸ್ತೆಯಲ್ಲೆಲ್ಲಾ ರುಚಿಗೋಲ್ಡ್ ಆಯಿಲ್ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು.

ಲಾರಿಯ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಅಪಘಾತ ನಡೆದ ದೃಶ್ಯ ಸಿಸಿಟಿವಿ ಕ್ಯಮರಾದಲ್ಲಿ ಸೆರೆಯಾಗಿದೆ.